Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಲ್ಪೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ‘ಸೀ...

ಮಲ್ಪೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ‘ಸೀ ವಾಕ್ ವೇ ಪಾಯಿಂಟ್’

ವಾರ್ತಾಭಾರತಿವಾರ್ತಾಭಾರತಿ1 Nov 2017 9:55 PM IST
share
ಮಲ್ಪೆಯಲ್ಲಿ ನಿರ್ಮಾಣಗೊಳ್ಳುತ್ತಿದೆ ‘ಸೀ ವಾಕ್ ವೇ ಪಾಯಿಂಟ್’

ಉಡುಪಿ, ನ.1: ಸಮುದ್ರದಲ್ಲಿ ನಡೆದಾಡಿದ ಮಧುರ ಅನುಭವಕ್ಕಾಗಿ ಮಲ್ಪೆ ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ‘ಸೀ ವಾಕ್ ವೇ ಪಾಯಿಂಟ್’ ಮೂರು ತಿಂಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಇದು ಪ್ರವಾಸಿಗರಿಗೆ ಹೊಸ ಅಕರ್ಷಣೆಯ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.

ವಿಶಿಷ್ಟವಾದ ಸೈಂಟ್‌ಮೇರೀಸ್ ದ್ವೀಪ, ಸುಂದರ ಮತ್ತು ಸ್ವಚ್ಛವಾದ ಸಮುದ್ರ ಕಿನಾರೆಯಿಂದಾಗಿ ಮಲ್ಪೆ ಈಗಾಗಲೇ ದೇಶದ ಪ್ರವಾಸೋದ್ಯಮ ಭೂಪಟದಲ್ಲಿ ಸ್ಥಾನ ಪಡೆದಿದ್ದು, ಇದೀಗ ನಡೆದಿರುವ ಇನ್ನಷ್ಟು ಅಭಿವೃದ್ಧಿ ಯೋಜನೆಗಳಿಂದ ಅದು ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲಿದೆ.

ಈ ಮೊದಲು ದ್ವೀಪದಂತಿದ್ದು, ಮಲ್ಪೆಯೊಂದಿಗೆ ನೇರ ಸಂಪರ್ಕಕ್ಕಾಗಿ ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಸೇತುವೆಯೊಂದು ನಿರ್ಮಾಣಗೊಳ್ಳುವ ಮೂಲಕ ಪ್ರವಾಸೋದ್ಯಮಕ್ಕೆ ಇತ್ತೀಚೆಗಷ್ಟೇ ತೆರೆದುಕೊಂಡಿರುವ ಪಡುಕೆರೆ, ಮಲ್ಪೆ ಪ್ರವಾಸೋದ್ಯಮದ ವಿಸ್ತರಣೆಗೆ ವೇಗವರ್ಧಕವಾಗಿದ್ದು, ಅಲ್ಲೀಗ ಹಲವು ಯೋಜನೆಗಳು ಕಾರ್ಯಗತಗೊಳ್ಳಲು ಸಿದ್ಧಗೊಳ್ಳುತ್ತಿವೆ. ಮಲ್ಪೆ ಅಭಿವೃದ್ಧಿ ಸಮಿತಿಯ ಮೂಲಕ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ 1.12 ಕೋಟಿ ರೂ.ಗಳಿಗೂ ಅಧಿಕ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ.

ಇವುಗಳ ಸಾಲಿಗೆ ಮಲ್ಪೆ ಮೀನುಗಾರಿಕಾ ಬಂದರಿನೊಳಗೆ ಟೆಗ್ಮಾ ಶಿಪ್ ಯಾರ್ಡ್‌ಗೆ ತಾಗಿಕೊಂಡೇ ಇರುವ ಬಂದರಿನ ದಕ್ಷಿಣ ಭಾಗದ ಪ್ರವಾಸಿ ಬೋಟ್ ಜೆಟ್ಟಿಯ ಸಮೀಪದ ಹಿನ್ನೀರಿನಲ್ಲಿ ಸುಮಾರು 53.5 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ‘ಸೀ ವಾಕ್ ವೇ ಪಾಯಿಂಟ್’ (ಸಮುದ್ರ ಕಾಲು ದಾರಿ) ಸೇರಲಿದೆ.

ವಿದೇಶಗಳಲ್ಲಿ ಸಾಮಾನ್ಯವಾಗಿರುವ ‘ಸೀ ವಾಕ್ ವೇ ಪಾಯಿಂಟ್’, ದೇಶ ದಲ್ಲಿ ಕೇರಳದಲ್ಲಿ ಮಾತ್ರ ನಿರ್ಮಾಣಗೊಂಡಿದೆ. ಇದೀಗ ಮಲ್ಪೆಯಲ್ಲಿ ಸಹ ಇದು ನಿರ್ಮಾಣಗೊಳ್ಳುತ್ತಿದೆ. ಬಂದರಿನಲ್ಲಿ ಈಗಾಗಲೇ ನಿರ್ಮಿಸಿರುವ ಬ್ರೇಕ್‌ವಾಟರ್ ಮೇಲೆ ಇದು ಮೈದಳೆಯುತ್ತಿದೆ.

ವಿದೇಶಗಳಲ್ಲಿ ಸಾಮಾನ್ಯವಾಗಿರುವ ‘ಸೀ ವಾಕ್ ವೇ ಪಾಯಿಂಟ್’, ದೇಶ ದಲ್ಲಿ ಕೇರಳದಲ್ಲಿ ಮಾತ್ರ ನಿರ್ಮಾಣಗೊಂಡಿದೆ. ಇದೀಗ ಮಲ್ಪೆಯಲ್ಲಿ ಸಹ ಇದು ನಿರ್ಮಾಣಗೊಳ್ಳುತ್ತಿದೆ. ಬಂದರಿನಲ್ಲಿ ಈಗಾಗಲೇ ನಿರ್ಮಿಸಿರುವ ಬ್ರೇಕ್‌ವಾಟರ್ ಮೇಲೆ ಇದು ಮೈದಳೆಯುತ್ತಿದೆ. ಸಮುದ್ರದಲ್ಲಿ ಈಗಾಗಲೇ ಇರುವ ಬ್ರೇಕ್‌ವಾಟರ್ ಕಲ್ಲಿನ ಹಾದಿ ಮೇಲೆ ವಾಕ್ ವೇ ತಲೆ ಎತ್ತಲಿದೆ. ಇದು ಸಮುದ್ರದಲ್ಲಿ 500ಮೀ. ಉದ್ದಕ್ಕೆ ಚಾಚಿ ಕೊಳ್ಳಲಿದ್ದು, 9ಮೀ. ಅಗಲವಿರಲಿದೆ. ಈಗಾಗಲೇ ಇರುವ ಕಲ್ಲನ್ನು ಸರಿಯಾಗಿ ಜೋಡಿಸಿ, ಮಣ್ಣು ತುಂಬಿ ಸಮತಟ್ಟುಗೊಳಿಸಿ ನಡಿಗೆಗೆ ಕಾಲುಹಾದಿಯನ್ನು ನಿರ್ಮಿಸಲಾಗುತ್ತದೆ.

ಮಾರ್ಗದ ಎರಡು ಬದಿಯಲ್ಲಿ ಕಲ್ಲಿನ ಬಂಡೆ, ಸುರಕ್ಷತೆಗಾಗಿ ರ್ಯಾಲಿಂಗ್ ನಿರ್ಮಾಣಗೊಳ್ಳಲಿದೆ. ಪ್ರವಾಸಿಗರು ಇದರ ಮೇಲೆ ನಡೆದಾಡಲು ಅನುಕೂಲ ವಾಗುವಂತೆ ಇಂಟರ್‌ಲಾಕ್‌ನ್ನು ಅಳವಡಿಸಲಾಗುವುದು. ಅದರ ಮೇಲೆ ಕೂತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು 15 ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಲಾಗುತ್ತದೆ. ಇಲ್ಲಿಂದ ಆಸುಪಾಸಿನ ಮೂರು ದ್ವೀಪಗಳನ್ನು ವೀಕ್ಷಿಸಬಹು ದಾಗಿದೆ.

ಮಾರ್ಗದ ಎರಡು ಬದಿಯಲ್ಲಿ ಕಲ್ಲಿನ ಬಂಡೆ, ಸುರಕ್ಷತೆಗಾಗಿ ರ್ಯಾಲಿಂಗ್ ನಿರ್ಮಾಣಗೊಳ್ಳಲಿದೆ. ಪ್ರವಾಸಿಗರು ಇದರ ಮೇಲೆ ನಡೆದಾಡಲು ಅನುಕೂಲ ವಾಗುವಂತೆ ಇಂಟರ್‌ಲಾಕ್‌ನ್ನು ಅಳವಡಿಸಲಾಗುವುದು. ಅದರ ಮೇಲೆ ಕೂತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು 15 ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಲಾಗುತ್ತದೆ. ಇಲ್ಲಿಂದ ಆಸುಪಾಸಿನ ಮೂರು ದ್ವೀಪಗಳನ್ನು ವೀಕ್ಷಿಸಬಹು ದಾಗಿದೆ. ಸಂಜೆಯ ವೇಳೆಗೆ ಇಲ್ಲಿ ಆರಾಮವಾಗಿ ಕುಳಿತು ನದಿ-ಕಡಲಿನ ರಮ್ಯತೆ, ತೆರೆಗಳ ಏರಿಳಿತದ ಆಟ, ಬೀಸುವ ಗಾಳಿಯ ಆಹ್ಲಾದಕತೆಯನ್ನು ಸವಿಯಲು ಸಾಧ್ಯವಿದೆ. ಅಲ್ಲದೇ ಮಾರ್ಗದುದ್ದಕ್ಕೂ 30ಕ್ಕೂ ಅಧಿಕ ಅಲಂಕಾರಿಕ ದೀಪ ಗಳನ್ನು ಅಳವಡಿಸಿ, ಬದಿಗಳಲ್ಲಿ ಗಿಡಗಳನ್ನು ಇಡಲಾಗುವುದು ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣಕುಮಾರ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X