ಚಿತ್ರ ನಟನಿಂದ 40 ಲಕ್ಷ ರೂ. ಪರಿಹಾರ ಕೇಳಿದ ರಿಕ್ಷಾ ಚಾಲಕ!
ನಟ ಎಸಗಿದ ತಪ್ಪೇನೆಂದು ತಿಳಿದರೆ ನಗದೆ ಇರಲಾರಿರಿ!

ಢಾಕಾ, ನ. 1: ಚಿತ್ರವೊಂದರಲ್ಲಿ ತನ್ನ ಮೊಬೈಲ್ ನಂಬರನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ರಿಕ್ಷಾ ಚಾಲಕರೊಬ್ಬರು, ಇದರಿಂದ ತನ್ನ ವೈವಾಹಿಕ ಜೀವನವೇ ಹಾಳಾಗಿದೆ ಎಂದಿದ್ದಾರೆ ಹಾಗೂ ನಾಯಕನ ನಟನ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
‘ರಾಜ್‌ನೀತಿ’ ಚಿತ್ರವು ಜೂನ್‌ನಲ್ಲಿ ಬಿಡುಗಡೆಯಾದ ಬಳಿಕ ತನ್ನ ಮೊಬೈಲ್‌ಗೆ ಪ್ರತಿ ದಿನ ನೂರಾರು ಕರೆಗಳು ಬರುತ್ತಿವೆ ಎಂದು ರಿಕ್ಷಾ ಚಾಲಕ ಇಜಾಜುಲ್ ಮಿಯಾ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.
ಚಿತ್ರದಲ್ಲಿ ದೇಶದ ಪ್ರಸಿದ್ಧ ತಾರೆ ಶಾಕಿಬ್ ಖಾನ್ ತನ್ನ ಪ್ರೇಯಸಿಗೆ ಮೊಬೈಲ್ ನಂಬರ್ ಕೊಡುವ ದೃಶ್ಯವಿದೆ. ಆ ದೃಶ್ಯದಲ್ಲಿ ಇಜಾಜುಲ್‌ರ ಮೊಬೈಲ್ ಸಂಖ್ಯೆಯನ್ನು ಬಳಸಲಾಗಿತ್ತು.
‘‘ಪ್ರತಿ ದಿನ ನನಗೆ ಶಾಕಿಬ್ ಖಾನ್‌ರ ಮಹಿಳಾ ಅಭಿಮಾನಿಗಳಿಂದ ನೂರಾರು ಕರೆಗಳು ಬರುತ್ತಿವೆ. ಹೊಸದಾಗಿ ಮದುವೆಯಾದ ನನ್ನ ಹೆಂಡತಿ ನನ್ನನ್ನು ತೊರೆಯುವ ಬೆದರಿಕೆ ಹಾಕಿದ್ದಾರೆ’’ ಎಂದರು.
ತನಗೆ 50 ಲಕ್ಷ ಟಾಕಾ (ಸುಮಾರು 40 ಲಕ್ಷ ರೂಪಾಯಿ) ಪರಿಹಾರ ನೀಡಬೇಕೆಂದು ಕೋರಿ ಖಾನ್ ವಿರುದ್ಧ ಮೊಕದ್ದಮೆ ದಾಖಲಿಸಲು ಅವರು ನಿರ್ಧರಿಸಿದ್ದಾರೆ.





