ರಾಜ್ಯೋತ್ಸವ ಪ್ರಶಸ್ತಿಗೆ ಒಬ್ಬ ರೈತನೂ ಸಿಗಲಿಲ್ಲವೇ? : ಸರಕಾರಕ್ಕೆ ಎಚ್‌ಡಿಕೆ ಪ್ರಶ್ನೆ

ಬೆಂಗಳೂರು, ನ.1: ರಾಜ್ಯೋತ್ಸವ ಪ್ರಶಸ್ತಿಗೆ ಒಬ್ಬ ರೈತನೂ ಸಿಗಲಿಲ್ಲವೇ? ಕನ್ನಡ ನೆಲ, ಜಲ, ಭಾಷೆ ಉಳಿದಿದ್ದೇ ರೈತರಿಂದ. ರಾಜ್ಯದಲ್ಲಿ 80 ಲಕ್ಷ ರೈತ ಕುಟುಂಬಗಳಿವೆ ಪ್ರಶಸ್ತಿಗೆ ಆಯ್ಕೆ ಮಾಡಲು ಸರಕಾರಕ್ಕೆ ಒಬ್ಬ ರೈತನೂ ಸಿಕ್ಕಿಲ್ಲವೇ? ಸರಕಾರ ಈ ವಿಚಾರದಲ್ಲೂ ರೈತರನ್ನು ಮರೆತಿರೋದು ಯಾಕೆ, ಎಲ್ಲ ಕ್ಷೇತ್ರಗಳನ್ನು ಪರಿಗಣಿಸುವಾಗ ರೈತರು ಮಾತ್ರ ಸರಕಾರದ ಕಣ್ಣಿಗೆ ಬಿದ್ದಿಲ್ಲ. ಇದು ರೈತರ ಬಗ್ಗೆ ಇರುವ ರಾಜ್ಯ ಸರಕಾರದ ಧೋರಣೆ ತೋರಿಸುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Next Story





