ಆಧಾರ್ ಇಲ್ಲದೆ ಆದಾಯ ತೆರಿಗೆ ಮರು ಪಾವತಿಗೆ ಮದ್ರಾಸ್ ಹೈಕೋರ್ಟ್ ಅನುಮತಿ

ಚೆನ್ನೈ, ನ. 1: ಆಧಾರ್ ಕಾರ್ಡ್ ಅಥವಾ ನೋಂದಣಿ ಸಂಖ್ಯೆ ದಾಖಲಿಸದೆ ತೆರಿಗೆ ಆದಾಯ ಮರುಪಾವತಿಗೆ ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ಮಹಿಳೆಯೋರ್ವರಿಗೆ ಅವಕಾಶ ನೀಡಿದೆ.
ಪ್ರೀತಿ ಮೋಹನ್ ಅವರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಟಿ.ಎಸ್. ಶಿವಗಂಗಂ ಈ ಮಧ್ಯಂತರ ಆದೇಶ ಮಂಜೂರು ಮಾಡಿದ್ದಾರೆ.
ಆದಾಯ ತೆರಿಗೆ ಮರುಪಾವತಿಗೆ ಆಧಾರ್ ಜೋಡಣೆ ಕುರಿತ ಬಿನೋಯ್ ವಿಶ್ವಂ ಹಾಗೂ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಪ್ರೀತಿ ಮೋಹನ್ ಈ ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭ ತೆರಿಗೆ ಮರು ಪಾವತಿಗೆ ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿತ್ತು ಹಾಗೂ ನಿರ್ದೇಶನ ನೀಡಿತ್ತು ಎಂದು ಮಹಿಳೆಯ ಪರ ವಕೀಲರು ಹೇಳಿದರು.
ಆಧಾರ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ ದಾಖಲಿಸದೆ ಜನರು ತೆರಿಗೆ ಮರು ಪಾವತಿಸಲು ಕೇರಳ ಉಚ್ಚ ನ್ಯಾಯಾಲಯ ಅನುಮತಿ ನೀಡಿರುವುದನ್ನು ಕೂಡ ಇಲ್ಲಿ ಮಹಿಳೆ ಪರ ವಕೀಲರು ಉಲ್ಲೇಖಿಸಿದರು.
Next Story





