ಟಿಪ್ಪು ಸುಲ್ತಾನ್ ಮುಖ ವಿರೂಪಗೊಳಿಸಿದ ಪ್ರಕರಣ: ಆರೋಪಿ ವಿರುದ್ಧ ದೂರು
ಬೆಳ್ತಂಗಡಿ, ನ. 1: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಮುಖವನ್ನು ವಿರೂಪಗೊಳಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಪಡಿಸಿ ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾನೆ ಎನ್ನಲಾದ ಬೆಳ್ತಂಗಡಿ ಸಂತೆಕಟ್ಟೆ ಫಾಸ್ಟ್ ಫುಡ್ ವ್ಯಾಪಾರಿ ಸುಕೇಶ್ ಪೂಜಾರಿ ಎಂಬಾತನ ಬಂಧನಕ್ಕೆ ಒತ್ತಾಯಿಸಿ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.
ಇಂತಹಾ ದುಷ್ಕೃತ್ಯಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದ್ದು, ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಐಕ್ಯತಾ ವೇದಿಕೆ ಒತ್ತಾಯಿಸಿತು.
ಮನವಿ ಸಲ್ಲಿಸುವ ನಿಯೋಗದಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಕೆ.ಸಲೀಮ್ , ಅಬ್ಬೊನು ಮದ್ದಡ್ಕ, ಅಬ್ದುಲ್ ರಹಿಮಾನ್ ಪಡ್ಪು, ಕೆ ಎಸ್ ಅಬ್ದುಲ್ಲಾ ಕರಾಯ, ಉಮರ್ ಅಹ್ಮದ್, ಅಕ್ಬರ್ ಬೆಳ್ತಂಗಡಿ, ನವಾಝ್ ಶರೀಫ್, ಇಸುಪ್ ಶರೀಫ್ ಕಾಜೂರು ಉಪಸ್ಥಿತರಿದ್ದರು.
Next Story





