ನೇಣು ಬಿಗಿದು ಕ್ರೈಸ್ತ ಸನ್ಯಾಸಿ ಆತ್ಮಹತ್ಯೆಗೆ ಶರಣು
ಶಿವಮೊಗ್ಗ, ನ. 1: ನೇಣು ಬಿಗಿದು ಕ್ರೈಸ್ತ ಸನ್ಯಾಸಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯ ಆಲ್ಕೋಳದ ಬಳಿಯಿರುವ ಚೈತನ್ಯ ಭವನದ ಅತಿಥಿ ಕೊಠಡಿಯಲ್ಲಿ ನಡೆದಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಸಮೀಪದ ಉಜಿರೆಯ ನಿವಾಸಿಯಾದ ಸುನೀಲ್ ಫೆರ್ನಾಂಡಿಸ್ (33) ಆತ್ಮಹತ್ಯೆಗೆ ಶರಣಾದ ಕ್ರೈಸ್ತ ಸನ್ಯಾಸಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಸುನೀಲ್ ಫರ್ನಾಂಡಿಸ್‍ರವರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್‍ಪೆಕ್ಟರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನೀಲ್ ಫೆರ್ನಾಂಡಿಸ್‍ರವರು ಸರಿಸುಮಾರು 14 ವರ್ಷಗಳಿಂದ 'ಬ್ರದರ್' ಆಗಿ ಸೇವೆ ಸಲ್ಲಿಸುತ್ತಿದ್ದರು.
Next Story





