ಹಳಿ ತಪ್ಪಿದ ಗೂಡ್ಸ್ ರೈಲು

ಹಾರ್ದಾ, ನ. 1: ಮಧ್ಯಪ್ರದೇಶ ಹಾರ್ದಾದ ಬಿರಂಗಿ ರೈಲ್ವೆ ನಿಲ್ದಾಣದ ಸಮೀಪ ಸರಕು ಸಾಗಿಸುತ್ತಿದ್ದ ರೈಲೊಂದು ಬುಧವಾರ ಹಳಿ ತಪ್ಪಿದೆ.
ರೈಲ್ವೆ ಹಳಿ ದುರಸ್ಥಿ ಕಾರ್ಯ ನಡೆಯುತ್ತಿದೆ. ಇಲ್ಲಿ ರೈಲು ಹಳಿ ತಪ್ಪಿದ ಅನೇಕ ಘಟನೆಗಳು ನಡೆದಿವೆ. ಅಕ್ಟೋಬರ್‌ನಲ್ಲಿ ಮಥುರಾ ರೈಲ್ವೆ ನಿಲ್ದಾಣದ ಸಮೀಪ ಸರಕು ರೈಲಿನ ಎರಡು ಬೋಗಿ ಹಳಿ ತಪ್ಪಿತ್ತು. ಇದೇ ತಿಂಗಳಲ್ಲಿ ಅಚ್ನೆರಾ-ಮಥುರಾ ನಡುವೆ ಸರಕು ರೈಲಿನ ಎರಡು ಬೋಗಿ ಹಳಿತಪ್ಪಿತ್ತು.
Next Story





