ದ.ಕ. ಜಿಲ್ಲಾ ಎಸ್‌ವೈಎಸ್: ಪದಾಧಿಕಾರಿಗಳ ಆಯ್ಕೆ
ಮಂಗಳೂರು, ನ.1: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ದ.ಕ. ಜಿಲ್ಲಾ ಸಮಿತಿಯ ಮಹಾಸಭೆಯು ಜಿಲ್ಲಾಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆಯಲ್ಲಿ ಮಾಣಿ ದಾರುಲ್ ಇರ್ಶಾದ್‌ನಲ್ಲಿ ನಡೆಯಿತು. ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ದುಆಗೈದರು.
ಸಮಿತಿಯ ಚುನಾವಣೆಯನ್ನು ರಾಜ್ಯ ಉಪಾಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ನಡೆಸಿಕೊಟ್ಟರು. ಈ ಸಂದರ್ಭ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಫಿ ಹಾಗೂ ಝೈನಿ ಕಾಮಿಲ್ ಸಖಾಫಿ, ತೋಕೆ ಕಾಮಿಲ್ ಸಖಾಫಿ, ಮಲ್ಲೂರು ಸಅದಿ, ಕೆ.ಕೆ.ಎಂ. ಕಾಮಿಲ್ ಸಖಾಫಿ ಉಪಸ್ಥಿತರಿದ್ದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕಿನಾರ ಮಂಗಳೂರು, ಕೋಶಾಧಿಕಾರಿ ಯಾಗಿ ಹನೀಫ್ ಹಾಜಿ ಉಳ್ಳಾಲ, ಉಪಾಧ್ಯಕ್ಷರಾಗಿ ಎಂ.ಎ. ಸಿದ್ದೀಕ್ ಸಖಾಫಿ ಮೂಳೂರು, ಸಿ.ಎಚ್. ಮುಹಮ್ಮದಲಿ ಸಖಾಫಿ ಅಶ್ಹರಿಯ್ಯ, ಅಬ್ದುಲ್ ಹಮೀದ್ ಬೀಜಕೊಚ್ಚಿ ಸುಳ್ಯ, ಕಾರ್ಯದರ್ಶಿಗಳಾಗಿ ಎನ್.ಎಸ್. ಉಮರ್ ಮಾಸ್ಟರ್, ಸಲೀಲ್ ಹಾಜಿ ಬಜ್ಪೆ, ಖಲೀಲ್ ಮುಸ್ಲಿಯಾರ್, ಸದಸ್ಯರಾಗಿ ಎಸ್.ಎಂ. ಕೋಯ ತಂಙಳ್ ಉಜಿರೆ, ಸೈಯದ್ ಅಬ್ದುಲ್ ಅಸ್ಸಾಂ ತಂಙಳ್ ಬೆಳ್ತಂಗಡಿ, ಹಂಝ ಮದನಿ ಮಿತ್ತೂರು, ಅಬೂಬಕರ್ ಸಅದಿ ಮಜೂರು, ಕತರ್ ಬಾವ ಹಾಜಿ, ಕೆ.ರಝ್ವಿ ಸಾಲೆತ್ತೂರು, ಖಾಸಿಂ ಪದ್ಮುಂಜೆ ಕುಪ್ಪೆಟ್ಟಿ, ಭಾವ ಫಕ್ರುದ್ದೀನ್ ಕೃಷ್ಣಾಪುರ, ಪಿ.ಕೆ. ಮುಹಮ್ಮದ್ ಮದನಿ ಕುಪ್ಪೆಟ್ಟಿ, ಎಂ.ಎಚ್. ಅಬ್ದುಲ್ ಖಾದರ್ ಉಪ್ಪಿನಂಗಡಿ, ಮುತ್ತಲಿಬ್ ಹಾಜಿ ನಾರ್ಶ, ಎಂ.ಇ. ಅಬ್ದುರ್ರಝಾಕ್ ಮದನಿ ಮಾಣಿ, ಅಬ್ದುಲ್ ಅಝೀಝ್ ಸಖಾಫಿ ಕೊಳ್ತಿಗೆ, ಅಬ್ದುಲ್ ಹಮೀದ್ ಸಖಾಫಿ ಕೊಡುಂಗೈ, ಹಾಜಿ ಅಬ್ದುರ್ರಝಕ್ ಸಖಾಫಿ ಕುಪ್ಪೆಟ್ಟಿ, ಅಬ್ದುಲ್ಲ ಮುಸ್ಲಿಯಾರ್ ಪುತ್ತೂರು, ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಮುಹಮ್ಮದ್ ಅಶ್ರಫ್ ಹಾಜಿ ಬಳ್ಳಾರಿ ಉಳ್ಳಾಲ ಆಯ್ಕೆಯಾದರು.








