ಮಲಬಾರ್ ಗೋಲ್ಡ್ : ಅದೃಷ್ಟ ಗ್ರಾಹಕಿಗೆ ಬಹುಮಾನ ವಿತರಣೆ

ಮಂಗಳೂರು, ನ.2: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ದೀಪಾವಳಿ ಹಬ್ಬದ ಪ್ರಯುಕ್ತ ದೇಶ-ವಿದೇಶದ ಶೋರೂಮ್‌ಗಳಲ್ಲಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಹಮ್ಮಿಕೊಂಡ ಯೋಜನೆಯ ಮೊದಲ ವಾರದ ವಿಜೇತೆಗೆ ಬಹುಮಾನ ವಿತರಿಸುವ ಕಾರ್ಯಕ್ರಮವು ಗುರುವಾರ ನಗರದ ಫಳ್ನೀರ್ ರಸ್ತೆಯ ಶೋ ರೂಮ್‌ನಲ್ಲಿ ಜರಗಿತು.
ಮೇಯರ್ ಕವಿತಾ ಸನಿಲ್ ಅದೃಷ್ಟಶಾಲಿ ಗ್ರಾಹಕಿ ಆಯಿಶತುಲ್ ಆಶಿಕಾರಿಗೆ 100 ಗ್ರಾಂ ಚಿನ್ನವನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭ ಮಲಬಾರ್ ಗೋಲ್ಡ್‌ನ ಮಂಗಳೂರು ಶೋರೂಮ್‌ನ ಉಪ ಮುಖ್ಯಸ್ಥ ಶರತ್‌ಚಂದ್ರನ್, ಉಡುಪಿ ಶೋರೂಮ್‌ನ ಮುಖ್ಯಸ್ಥ ಹಫೀಝ್ ರಹ್ಮಾನ್ ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ದೀಪಾವಳಿ ಪ್ರಯುಕ್ತ ತನ್ನ ಗ್ರಾಹಕರಿಗೆ 30 ಸಾವಿರ ರೂ. ಮೇಲ್ಪಟ್ಟು ಚಿನ್ನಾಭರಣ ಮತ್ತು 25 ಸಾವಿರ ರೂ. ಮೇಲ್ಪಟ್ಟು ವಜ್ರಾಭರಣ ಖರೀದಿಸುವ ಗ್ರಾಹಕರ ಪೈಕಿ ಅದೃಷ್ಟಶಾಲಿಗಳಿಗೆ ಒಟ್ಟು 100 ಕೆ.ಜಿ. ಚಿನ್ನವನ್ನು ಉಡುಗೊರೆಯಾಗಿ ನೀಡಲು ಯೋಜನೆಯೊಂದನ್ನು ಹಮ್ಮಿಕೊಂಡಿತು. ಮೊದಲ ವಾರದ ಅದೃಷ್ಟ ಚೀಟಿಯನ್ನು ಬೆಂಗಳೂರಿನ ಡಿಕೆನ್‌ಸನ್ ರೋಡ್‌ನ ಶೋರೂಮ್‌ನಲ್ಲಿ ನಡೆಸಲಾಗಿದ್ದು, ಮಂಗಳೂರಿನ ಆಯಿಶತುಲ್ ಆಶಿಕಾ ವಿಜೇತರಾಗಿದ್ದರು.





