ಉಳ್ಳಾಲ: ಪೊಸಕುರಲ್ ಬಳಗದ ವತಿಯಿಂದ ಡಾ. ಡಿ.ವೀರೆಂದ್ರ ಹೆಗ್ಗಡೆ ಅವರಿಗೆ ಸನ್ಮಾನ

ಉಳ್ಳಾಲ, ನ. 2: 50ನೆ ವರ್ಷದ ಪಟ್ಟಾಭೀಷೇಕ ಉತ್ಸವವನ್ನು ಆಚರಿಸುತಿರುವ ಪದ್ಮ ವಿಭೂಷಣ ಡಾ. ಡಿ.ವೀರೆಂದ್ರ ಹೆಗ್ಗಡೆಯವರನ್ನು ಉಳ್ಳಾಲದ ಜನಮನದ ಸಂಗತಿ ಪೊಸಕುರಲ್ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಸಂತ ಸೆಬೆಸ್ಟೀಯನ್ ಧರ್ಮಕೇಂದ್ರದ ಪ್ರಧಾನ ಧರ್ಮ ಗುರು ವಂ.ಫಾ. ಡಾ ಜೆ. ಬಿ ಸಲ್ದಾನ, ಭಗಿನಿಯರು, ಪಾಲನ ಮಂಡಳಿ ಉಪಧ್ಯಾಕ್ಷ ಮೆಲ್ವಿನ್ ಸಿ. ಡಿ’ಸೋಜ ಹಾಗೂ ಸದಸ್ಯರು, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಪಾವೂರು, ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯ ಕೃಷ್ಣ ಗಟ್ಟಿ ಅಡ್ಕ, ಹಿರಿಯ ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರು, ಸೀತಾರಾಮ ಕೊಲ್ಯ, ಹರೆಕಳ ರಾಮಕೃಷ್ಣ ಶಾಲಾ ಮೂಖ್ಯೋಪಾಧ್ಯಾಯ ರವೀಂದ್ರ ರೈ ಹರೆಕಳ, ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಗಟ್ಟಿ, ಕೊಟೆಕಾರು ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕನೀರ್ ತೋಟ, ಉಳ್ಳಾಲ ನಗರ ಸಭೆ ಸ್ಥಾಯಿ ಸಮಿತಿ ಆಧ್ಯಕ್ಷ ಉಸ್ಮಾನ್ ಕಲ್ಲಾಪು, ಪ್ರಮುಖರು ಸರ್ವಶ್ರೀ ಕೃಷ್ಣ ಶೆಟ್ಟಿ ತಾಮರ್, ಆನಂದ್ ಶೆಟ್ಟಿ. ಸಂಜೀವ ಶೆಟ್ಟಿ ಅಂಬ್ಲಮೊಗರು, ವಿನ್ಸಂಟ್ ನಝರತ್, ರಾಜೇಶ್ ಮೂಂಡೋಳಿ, ಮೋಹನ್ ಶಿರ್ಲಾಲ್ ಹಾಗೂ ಪೊಸಕುರಲ್ ನೀರ್ಧೆಶಕರು ವಿದ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು.





