ಸಾಲ ಭಾದೆ: ರೈತ ಆತ್ಮಹತ್ಯೆ

ಚಿಕ್ಕಮಗಳೂರು, ನ.2: ಸಾಲ ಬಾದೆ ತಾಳಲಾರದೇ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಗಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಚಂದ್ರಾನಾಯ್ಕ(56) ಎಂದು ಗುರುತಿಸಲಾಗಿದೆ. ಈತ ತಮ್ಮ ಜಮೀನಿಗೆ 3 ಕೊಳವೆ ಬಾವಿ ಕೊರೆಸಲು ಸಾಲ ಮಾಡಿಕೊಂಡಿದ್ದರು. ಆದರೆ ನೀರು ಸರಿಯಾಗಿ ಲಭ್ಯವಾಗಿರಲಿಲ್ಲ. ಇದರಿಂದ ಜಮೀನಿನಲ್ಲಿ ಕೊಬ್ಬರಿ ಸಹಿತ ವಿವಿಧ ಬೆಳೆಗಳು ಸುಟ್ಟು ಹೋಗಿದ್ದವು.
ಜಮೀನು ಅಭಿವೃದ್ಧಿಗಾಗಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ 1 ಲಕ್ಷ ರೂ.ಗಳ ಸಾಲ, ಚೇತನ್ ಮೈಕ್ರೋಸಾಪ್ಟ್ ನಿಂದ 50 ಸಾವಿರ, ಗ್ರಾಮಶಕ್ತಿ, ಗ್ರಾಮಕೂಟದಿಂದ 50 ಸಾವಿರ ರೂ.ಗಳ ಬೆಳೆ ಸಾಲ ಪಡೆದುಕೊಂಡಿದ್ದರು. ಆದರೆ ಸಕಾಲದಲ್ಲಿ ಬೆಳೆ ಸರಿಯಾಗಿ ಬಾರದೆ ಕೈಕೊಟ್ಟಿದ್ದರಿಂದ ಸಾಲಗಾರರ ಕಾಟ ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Next Story





