3 ಓವರ್ ಗಳಲ್ಲಿ ಶತಕ ಸಿಡಿಸಿದ್ದ ವಿಶ್ವಪ್ರಸಿದ್ಧ ಕ್ರಿಕೆಟಿಗ ಯಾರು ಗೊತ್ತೇ?

1931ರಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ವಿಶ್ವ ಕಂಡ ಪ್ರಸಿದ್ಧ ಕ್ರಿಕೆಟಿಗನೊಬ್ಬ ಕೇವಲ 3 ಓವರ್ ಗಳಲ್ಲಿ ಶತಕ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದ. ನ್ಯೂ ಸೌತ್ ವೇಲ್ಸ್ ನ ಬ್ಲು ಮೌಂಟೇನ್ಸ್ ರೀಜನ್ ನಲ್ಲಿ ಬ್ಲ್ಯಾಕ್ ಹೀತ್ ಹಾಗು ಲಿಥ್ಗೋ ತಂಡಗಳ ವಿರುದ್ಧ ನಡೆದ ಪಂದ್ಯದಲ್ಲಿ ಸರ್ ಡಾನ್ ಬ್ರಾಡ್ಮನ್ 3 ಓವರ್ ಗಳಲ್ಲಿ 100 ರನ್ ಸಿಡಿಸಿದ್ದರು.
ಅಂದಹಾಗೆ ಆ ಸಮಯದಲ್ಲಿ ಓವರೊಂದಕ್ಕೆ 8 ಬಾಲ್ ಗಳಿತ್ತು. ಅಂದು 23 ವರ್ಷದವರಾಗಿದ್ದ ಬ್ರಾಡ್ಮನ್ ಮೊದಲ ಓವರ್ ನಲ್ಲೇ 38 ರನ್ ಗಳನ್ನು ಸಿಡಿಸಿದ್ದರು.
2 ಓವರ್ ನಲ್ಲಿ ಸ್ಥಳೀಯ ಬೌಲರ್ ಆಗಿದ್ದ ಬಿಲ್ ಬ್ಲ್ಯಾಕ್ ಎಂಬವರು ಬ್ರಾಡ್ ಮನ್ ಅವರಿಗೆ ಬೌಲ್ ಮಾಡಿದ್ದರು. ಆ ಓವರ್ ನಲ್ಲಿ 33 ರನ್ ಗಳನ್ನು ಬ್ರಾಡ್ ಮನ್ ಸಿಡಿಸಿದ್ದರು. ಇದರಲ್ಲಿ 3 ಸಿಕ್ಸರ್ ಗಳು, 3 ಬೌಂಡರಿ ಸೇರಿತ್ತು.
ಮೂರನೆ ಓವರ್ ನಲ್ಲಿ 6,4,4,6,6,4,6,4 ಸಿಡಿಸಿದ ಅವರು 40 ರನ್ ಗಳ ಮೂಲಕ ಶತಕ ದಾಖಲಿಸಿದ್ದರು. ಈ ಮೂಲಕ 3 ಓವರ್ ಗಳಲ್ಲಿ 102 ರನ್ ಗಳಿಸಲಾಗಿತ್ತು. ಇದರಲ್ಲಿ 100 ರನ್ ಬ್ರಾಡ್ ಮನ್ ಅವರದ್ದಾಗಿತ್ತು. ಕೊನೆಗೆ 256 ರನ್ ಗಳಿಸಿದ್ದಾಗ ಅವರು ಔಟಾದರು.






