ಬಿಜೆಪಿ ಪರಿವರ್ತನಾ ಬೈಕ್ ರ್ಯಾಲಿಗೆ ಚಾಲನೆ
ಎದ್ದುಕಂಡು ಸೊಗಡು ಶಿವಣ್ಣ ಗೈರು ಹಾಜರಿ

ತುಮಕೂರು, ನ.02:ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ನವ ಕರ್ನಾಟಕದ ನಿರ್ಮಾಣಕ್ಕಾಗಿ “ಪರಿವರ್ತನಾ ಯಾತ್ರೆ”ಯ ಬಹಿರಂಗ ಸಭೆಗೆ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ 2500ಕ್ಕೂ ಹೆಚ್ಚು ಕಾರ್ಯಕರ್ತರು ಬೈಕ್‍ರ್ಯಾಲಿ ಮೂಲಕ ತೆರಳಿದ್ದು,ತುಮಕೂರು ನಗರದಿಂದ ಜಿಲ್ಲಾಧ್ಯಕ್ಷ ಜೋತಿ ಗಣೇಶ್ ನೇತೃತ್ವದಲ್ಲಿ ಐದು ನೂರಕ್ಕೂ ಹೆಚ್ಚು ಬೈಕ್‍ಗಳಲ್ಲಿ ನೂರಾರು ಕಾರ್ಯಕರ್ತರು ತೆರಳಿದರು.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ರ್ಯಾಲಿ ಎಸ್.ಎಸ್.ಪುರಂ ಮುಖ್ಯರಸ್ತೆಯ ಮೂಲಕ ಬಿ.ಹೆಚ್.ರಸ್ತೆ ತಲುಪಿ ನಂತರ, ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.ಜಿಲ್ಲೆಯ ಕುಣಿಗಲ್, ತುಮಕೂರು ಗ್ರಾಮಾಂತರ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ನಗರ, ತಿಪಟೂರು, ಗುಬ್ಬಿ, ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಸಿರಾ ವಿಧಾನಸಭಾ ಕ್ಷೇತ್ರಗಳಿಂದಲೂ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೆಲ್ಮೆಟ್ ಇಲ್ಲದೆ ರ್ಯಾಲಿಯಲ್ಲಿ ಪಾಲ್ಗೊಂಡ ಕಾರ್ಯಕರ್ತರು: ರ್ಯಾಲಿಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಯಕರ್ತ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಹೆಲ್ಮೆಟ್ ಇಲ್ಲದೆ ರ್ಯಾಲಿಯಲ್ಲಿ ಭಾಗವಹಿಸಿದ್ದು,ಕಣ್ಣ ಮುಂದೆಯೇ ಕಾನೂನು ಉಲ್ಲಂಘನೆ ಯಾಗಿದ್ದರೂ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದು ಕಂಡು ಬಂತ್ತು.
ಸೊಗಡು ಶಿವಣ್ಣ ಗೈರು:ಹತ್ತಾರು ವರ್ಷಗಳ ಕಾಲ ಬರಿಗಾಲಲ್ಲಿ ಪಕ್ಷವನ್ನು ಕಟ್ಟಿದ ಮಾಜಿ ಸಚಿವ ಸೊಗಡು ಶಿವಣ್ಣ ಬೈಕ್‍ರ್ಯಾಲಿಯಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೆ ಗೈರಾಗಿರುವುದು ಕಂಡು ಬಂತ್ತು. ಹತ್ತಾರು ವರ್ಷಗಳ ನಿಷ್ಠಾವಚಿತರಾಗಿ ಪಕ್ಷ ಕಟ್ಟಿದವರನ್ನು ಬದಿಗೊತ್ತಿಗೆ ಕಾಂಗ್ರೆಸ್‍ನಿಂದ, ಬಿಜೆಪಿಗೆ, ಬಿಜೆಪಿಯಿಂದ ಕೆ.ಜೆ.ಪಿಗೆ ಹಾಗೂ ಅಲ್ಲಿಂದ ವಾಪಸ್ಸಾಗಿರುವ ಕುಟುಂಬಕ್ಕೆ ಪಕ್ಷದ ಚುಕ್ಕಾಣಿ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವರು ಬಿ.ಎಸ್.ವೈ ವಿರುದ್ದ ಮುನಿಸಿಕೊಂಡಿದ್ದು,ಇಂದಿನ ಬೈಕ್‍ರ್ಯಾಲಿಯಲ್ಲಿಯೂ ಅವರ ಮುಖ ಕಂಡು ಬರಲಿಲ್ಲ.ಇದು ಬಿಜೆಪಿಯಲ್ಲಿ ಇನ್ನೂ ಭಿನ್ನಮತ ಹೊಗೆಯಾಡುತ್ತಿರುವುದಕ್ಕೆ ಜೀವಚಿತ ಉದಾಹರಣೆ ಎನ್ನಬಹುದು.
ಬೈಕ್ ರ್ಯಾಲಿಯಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಬಿಜೆಪಿ ಮುಖಂಡರಾದ ಸಿ.ಎನ್. ರಮೇಶ್, ಹೆಬ್ಬಾಕ ರವಿಶಂಕರ್, ಬಾವಿಕಟ್ಟೆ ನಾಗಣ್ಣ, ಡಾ. ಎಂ.ಆರ್. ಹುಲಿನಾಯ್ಕರ್ ಮತ್ತಿತರರು ಪಾಲ್ಗೊಂಡಿದ್ದರು.







