ಬ್ರೆಗೇಡ್ಸ್ ಗ್ರೂಪ್ ಮೇಲೆ ಐಟಿ ದಾಳಿ

ಮೈಸೂರು,ನ.2: ಬ್ರಿಗೇಡ್ಸ್ ಗ್ರೂಪ್‍ಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್ ನೀಡಿದೆ. ಗುರುವಾರ ಬೆಳಗ್ಗೆ ಐಟಿ ಅಧಿಕಾರಿಗಳ ತಂಡ ವಿವಿ ಮೊಹಲ್ಲಾ ರಸ್ತೆಯಲ್ಲಿರುವ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್, ಬ್ರಿಗೇಡ್ ಪಾಯಿಂಟ್ಸ್ ಮೇಲೆ ದಾಳಿ ನಡೆಸಿದೆ.
ಬ್ರಿಗೇಡ್ಸ್ ಗ್ರೂಪ್ ಮೇಲೆ ದಾಳಿ ನಡೆಸಿದ 15 ಐಟಿ ಅಧಿಕಾರಿಗಳ ತಂಡ ಮಹತ್ವದ ದಾಖಲೆಗಳನ್ನು ಕಲೆ ಹಾಕಿ ಪರಿಶೀಲನೆ ನಡೆಸುತ್ತಿದೆ.
ಇನ್ನು ಐಟಿ ಅಧಿಕಾರಿಗಳು ಅಪಾರ್ಟ್‍ಮೆಂಟ್‍ನಲ್ಲಿರುವವರ ಸಂಪೂರ್ಣ ವಿವರವನ್ನು ಪಡೆದಿದ್ದು, ತನಿಖೆಗೆ ಜಯಲಕ್ಷ್ಮಿಪುರಂ ಠಾಣೆಯ ಪೊಲೀಸರ ಸಹಕಾರ ಪಡೆದಿದ್ದಾರೆ.
Next Story





