ಶ್ರೀಲಂಕಾ: 14 ತಮಿಳುನಾಡು ಮೀನುಗಾರರ ಬಂಧನ

ರಾಮೇಶ್ವರಂ, ನ. 1: ಶ್ರೀಲಂಕಾದ ನೆಡುಂತೀವುನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೆಂದು ಹೇಳಲಾದ ತಮಿಳುನಾಡಿನ 14 ಮೀನುಗಾರ ರನ್ನು ಶ್ರೀಲಂಕಾದ ನೌಕಾ ಪಡೆ ಗುರುವಾರ ಬಂಧಿಸಿದೆ.
ನಿಷೇಧಿತ ಮೀನುಗಾರಿಕೆ ಬಲೆ ಬಳಸಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಇಲ್ಲಿಂದ ಹಾಗೂ ಪುದುಕೋಟೈ ಜಿಲ್ಲೆಯಿಂದ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಮಣಿಕಂಠನ್ ತಿಳಿಸಿದ್ದಾರೆ.
Next Story





