ಆರೋಪ ನಿರಾಧಾರ:ಎಸ್‍ಡಿಪಿಐ ಸ್ಪಷ್ಟನೆ
ಮಂಡ್ಯ, ನ.2: ನಾಗಮಂಗಲ ತಾಲೂಕು ಬೆಳ್ಳೂರಿನ ಆರೆಸ್ಸೆಸ್ ಕಾರ್ಯಕರ್ತ ಲೋಕೇಶ್ ಎಂಬುವರು ತಮ್ಮ ಸಂಘಟನೆ ವಿರುದ್ಧ ಮಾಡಿರುವ ಆರೋಪ ನಿರಾಧಾರ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಪಾಷ ಸ್ಪಷ್ಟಪಡಿಸಿದ್ದಾರೆ.
ಪಿಎಫ್‍ಐ ಸಂಘಟನೆಯ ಸೂಫಿ ಮತ್ತು ನಾಜಿಂ ಎಂಬುವರು ತನಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಲೋಕೇಶ್ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ. ಆದರೆ, ಸೂಫಿ ಮತ್ತು ನಾಜಿಂ ಯಾರೆಂಬುದು ತಮಗೆ ತಿಳಿದಿಲ್ಲವೆಂದು ಪಾಷ ಹೇಳಿದ್ದಾರೆ.
ಲೋಕೇಶ್ ಎಂಬುವರು ತಮ್ಮ ಸಂಘಟನೆಯ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸುಳ್ಳು ಆರೋಪದಿಂದ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಲೋಕೇಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಎಸ್ಪಿ ಅವರಿಗೆ ದೂರು ನೀಡಿದ್ದಾರೆ.
Next Story





