ರಿಕ್ಷಾ ಪಲ್ಟಿ: ಸವಾರ ಮೃತ್ಯು
ಬ್ರಹ್ಮಾವರ, ನ.2: ಅಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಅದರಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶೀರೂರು ಗ್ರಾಮದ ನಿರ್ಜೇಡ್ಡು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತರನ್ನು ಶೀರೂರು ಗ್ರಾಮ ಮುದ್ದುಮನೆ ವಾಜನೂರಿನ ಗೋಪಾಲ ನಾಯ್ಕ ಎಂದು ಗುರುತಿಸಲಾಗಿದೆ.
ಇವರು ತನ್ನ ಪರಿಚಯದ ಪರಮೇಶ, ಮಹೇಶ್ ನಾಯ್ಕ ಹಾಗೂ ಭೀಮಾ ನಾಯ್ಕ ಎಂಬವರೊಂದಿಗೆ ಅಟೋರಿಕ್ಷಾದಲ್ಲಿ ನೀರ್ಜೆಡ್ಡುವಿ ನಿಂದ ಹೊಳೆಬಾಗಿಲಿಗೆ ಬರುತಿದ್ದಾಗ ಇಳಿಜಾರು ರಸ್ತೆಯಲ್ಲಿ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡ ಗೋಪಾಲ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಪರಮೇಶ್‌ಗೆ ಸಣ್ಣ ಗಾಯವಾಗಿತ್ತು. ಈ ಬಗ್ಗೆ ಬಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





