ಮಂಗಳೂರು: ಎಸ್‌ಡಿಎಯುನಿಂದ ಶ್ರಮದಾನ

ಮಂಗಳೂರು, ನ. 2: ಸೋಶಿಯಲ್ ಡೆಮೋಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಇದರ ಅಧೀನದ ಸೋಶಿಯಲ್ ಡೆಮೋಕ್ರಟಿಕ್ ಅಟೋ ಯೂನಿಯನ್ (ಎಸ್‌ಡಿಎಯು) ಮಂಗಳೂರು ನಗರ ಸಮಿತಿಯ ವತಿಯಿಂದ ನಗರದ ನೆಲ್ಲಿಕಾಯಿ ರಸ್ತೆಯಲ್ಲಿ ಹದಗೆಟ್ಟಿದ ರಸ್ತೆಯನ್ನು ಸರಿ ಪಡಿಸಲಾಯಿತು. ಅಲ್ಲದೆ, ಬಂದರಿನ ಒಳಗೆ ಪ್ರವೇಶಿಸುವ ಕುಬ್ಬನೂರು ಹೋಟೇಲಿನ ಮುಂಭಾಗದಲ್ಲಿ ನಗರ ಪಾಲಿಕೆ ವಿಲೇವಾರಿ ಮಾಡದೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಣ್ಣು ಗಳನ್ನು ರಾಶಿ ಹಾಕಲಾಗಿದ್ದ್ದು ಶ್ರಮದಾನದ ಮೂಲಕ ರಾಶಿ ಮಣ್ಣನ್ನು ತೆರವುಗೊಳಿಸಲಾಯಿತು.
ನಗರ ಸಮಿತಿಯ ಅದ್ಯಕ್ಷ ನೌಫಾಲ್ ಕುದ್ರೋಳಿ ನೇತೃತ್ವ ವಹಿಸಿದ್ದರು. ಶ್ರಮದಾನ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಶ್ರಫ್ ಕಂದಕ್, ಸದಸ್ಯರಾದ ಹಕೀಂ, ರಮೀಝ್ ಹಾಗೂ ಇತರ 30ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
Next Story





