ನೆರೆಮನೆಯವರ ನಿಂದನೆ -ಆರೋಪ : ವ್ಯಕ್ತಿ ಆತ್ಮಹತ್ಯೆ

ಮಂಡ್ಯ, ನ.2: ನೆರೆಮನೆಯವರು ತನ್ನ ವಿರುದ್ಧ ಸಲ್ಲದ ಆರೋಪ, ನಿಂದನೆ ಮತ್ತು ವಿನಾಕಾರಣ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಭೂತನಹೊಸೂರಿನಲ್ಲಿ ಸಂಭವಿಸಿದೆ.
ಶಿವನಂಜೇಗೌಡ ಆತ್ಮಹತ್ಯೆ ಮಾಡಿಕೊಂಡವ. ಗ್ರಾಮದ ಸಣ್ಣೇಗೌಡರ ಪತ್ನಿ ಪುಟ್ಟತಾಯಮ್ಮ, ಶಂಕರ್, ಡೇರಿ ಸವಿತಾ ಅವರ ಮಾನಸಿಕ ಕಿರುಕುಳ ಸಹಿಸದೆ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಮಂಗಳ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಗಂಡ ಕುಡುಕ, ಇತ್ಯಾದಿಯಾಗಿ ಶಂಕರ್ ಕುಟುಂಬದವರು ಪದೆ ಪದೆ ನಿಂದಿಸುತ್ತಿದ್ದರು. ಹಲವು ಬಾರಿ ಪೊಲೀಸರಿಗೆ ಸುಳ್ಳು ದೂರು ನೀಡಿದ್ದರು. ಬುಧವಾರ ಸಂಜೆಯೂ ಇದೇ ವಿಚಾರವಾಗಿ ಜಗಳವಾಯಿತು. ಮನನೊಂದ ಪತಿ ತಡರಾತ್ರಿ ಮನೆಯ ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





