ಟ್ಯಾಂಕರ್ ಢಿಕ್ಕಿ:ಬೈಕ್ ಸವಾರ ಮೃತ್ಯು

ನಾಗಮಂಗಲ, ನ.2: ಆಯಿಲ್ ಟ್ಯಾಂಕರ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಾರಬೈಲು ಗೇಟ್ ಸಮೀಪ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಹಾಸನ ತಾಲೂಕು ಶಾಂತಿ ಗ್ರಾಮ ಹೋಬಳಿ ದೊಡ್ಡಚಾಕೇನಹಳ್ಳಿ ಗ್ರಾಮದ ಲಕ್ಷ್ಮಣಗೌಡರ ಮಗ ಬಸವೇಗೌಡ(52) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರನೆಂದು ಗುರುತಿಸಲಾಗಿದೆ.
ಬೆಂಗಳೂರು ಕಡೆಯಿಂದ ತನ್ನ ಗ್ರಾಮದ ಕಡೆ ಬಸವೇಗೌಡ ಬೈಕ್‍ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಸವೇಗೌಡರ ತಲೆ ಬಜ್ಜಿಯಾಗಿದ್ದು, ಅವರ ಕಿಸೆಯಲ್ಲಿದ್ದ ಮೊಬೈಲ್ ಸಹಾಯದಿಂದ ವಿಳಾಸ ಪತ್ತೆಹಚ್ಚಲಾಯಿತು. ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ ಎಂದು ಬೆಳ್ಳೂರು ಪೊಲೀರು ತಿಳಿಸಿದ್ದಾರೆ.
Next Story





