ಪರಿವರ್ತನಾ ರ್ಯಾಲಿ ಬದಲು ಪ್ರಾಯಶ್ಚಿತ ರ್ಯಾಲಿ ನಡೆಸಲಿ:ರಾಯಸಂದ್ರ ರವಿಕುಮಾರ್
ತುಮಕೂರು,ನ.02:ಕೆಜೆಪಿ-ಬಿಜೆಪಿ ಗೊಂದಲದ ನಡುವೆಯೂ ಬೆಂಬಲವಾಗಿ ನಿಂತ ನಿಷ್ಠಾವಂತ ಕಾರ್ಯಕರ್ತರು ಬೆಂಬಲಿಗರನ್ನು ಕಡೆಗಣಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಂಬಿಕೆ ಅರ್ಹರಲ್ಲ.ಬಿ.ಎಸ್.ವೈ ನೇತೃತ್ವದಲ್ಲಿ ನಡೆಯುತ್ತಿರುವುದು ಪರಿವರ್ತನಾ ರ್ಯಾಲಿಯಲ್ಲ.ಪ್ರಾಯಶ್ಚಿತ ರ್ಯಾಲಿ ಎಂದು ಬಿಎಸ್‍ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆಜೆಪಿ ಯುವ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ರಾಯಸಂದ್ರ ರವಿಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಬಿ.ಎಸ್.ವೈ ಅವರನ್ನು ನಂಬಿ ಕೆಜೆಪಿಯೊಂದಿಗೆ ಗುರುತಿಸಿಕೊಂಡ ನೂರಾರು ಕಾರ್ಯಕರ್ತರು,ಮುಖಂಡರು ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.ಹಲವು ಬಾರಿ ಬಿಎಸ್‍ವೈಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಭರವಸೆ ನೀಡುತ್ತಾ ಕಾಲಹರಣ ಮಾಡಿದರು.ಇವರ ಮಾತು ನಂಬಿ ಕೆಜೆಪಿ ಕಟ್ಟಿದÀ ಧನಂಜಯ ಕುಮಾರ್. ಎಂಡಿಎಲ್,ರಾಜೇಂದ್ರ ಗೋಕಲೆ,ಲೋಕೇಶ್ವರ್ ಸೇರಿದಂತೆ ಜೊತೆಗಿದ್ದವರಿಗೆ ರಾಜಕೀಯವಾಗಿ ಸ್ಥಾನಮಾನ ಕೊಡಿಸುವುದಿರಲ್ಲಿ ಅವರ ಮಾನ ಉಳಿಸುವ ಕೆಲಸವನ್ನು ಬಿಎಸ್‍ವೈ ಬಿಜೆಪಿ ಸೇರಿದ ನಂತರ ಮಾಡಲಿಲ್ಲ.
ಬಿಜೆಪಿ ಮುಖಂಡರು ಜೈಲಿಗೆ ಕಳುಹಿಸಿದರು ಎಂದು ಬೊಬ್ಬೆ ಹೊಡೆದು ಕೆ.ಜೆ.ಪಿ.ಕಟ್ಟಿದ ಬಿಎಸ್‍ವೈ, ಪುನಃ ಅವರೊಂದಿಗೆ ಸೇರಿ ರಾಜ್ಯದಲ್ಲಿ ಪರಿವರ್ತನಾ ರ್ಯಾಲಿ ಮಾಡಲು ಹೊರಟಿರುವುದು ವಿಪರ್ಯಾಸ.ಮೊದಲು ಬಿಜೆಪಿ ಪರಿವರ್ತನಾ ರ್ಯಾಲಿ ಅಥವಾ ಪಶ್ಚಾಪಾತ ರ್ಯಾಲಿ ಮಾಡಲಿ ಎಂದರು.
ಲೋಕೇಶ್ವರ್ ಸೇರಿದಂತೆ ಅನೇಕ ಮುಖಂಡರನ್ನು ಬಿಜೆಪಿ ಹಾಗೂ ಆರ್‍ಎಸ್‍ಎಸ್ ನಾಯಕರು ದೂರವಿಟ್ಟಾಗಲು ಬಿಎಸ್‍ವೈ ಮೌನಿಯಾಗಿದ್ದರು. ತಮ್ಮ ಸ್ವಾರ್ಥಕ್ಕಾಗಿ ಬೆಂಬಲಿಗರನ್ನ ಕಳೆದುಕೊಂಡಿರುವ ಬಿಎಸ್‍ವೈಗೆ ಬಿಜೆಪಿಯಲ್ಲಿ ಕಿಮ್ಮತ್ತಿಲ್ಲ, ಉತ್ಸವ ಮೂರ್ತಿಯಂತೆ ರಾಜ್ಯಾಧ್ಯಕ್ಷರಾಗಿದ್ದಾರೆ ಅಷ್ಟೆ. ಮುಂದಿನ ಚುನಾವಣೆಯಲ್ಲಿ ಅವರನ್ನು ನಂಬುವ ಜನರಿಲ್ಲ, ಪರಿವರ್ತನಾ ರ್ಯಾಲಿಗೆ ಬದಲಾಗಿ ಪಶ್ಚಾಪಾತ ರ್ಯಾಲಿ ಮಾಡಲಿ ಎಂದು ರಾಯಸಚಿದ್ರ ರವಿಕುಮಾರ್ ಸಲಹೆ ನೀಡಿದರು.
ವೈಚಾರಿಕ ಬದ್ಧತೆಯಿಲ್ಲ:ವೈಚಾರಿಕವಾಗಿ ಬದ್ಧತೆಯಿಲ್ಲ ಬಿಎಸ್‍ವೈ ಕೆಜೆಪಿ ಕಟ್ಟಿದಾಗ ವೀರಸೇನಾನಿ, ದೇಶಭಕ್ತ ಎಂದು ಟಿಪ್ಪು ಹೆಸರೇಳಿಕೊಂಡು,ಜಯಂತಿ ಆಚರಿಸಿ ಸಂಭ್ರಮಿಸಿದರು. ಆದರೆ ತಮ್ಮ ಸ್ವಾರ್ಥಕ್ಕಾಗಿ ಮತ್ತೆ ಬಿಜೆಪಿ ಸೇರಿದ ನಂತರ ಟಿಪ್ಪುವನ್ನು ದೇಶದ್ರೋಹಿ ಎಂದು ಹೇಳುತ್ತಿರುವುದು ಅವರ ವೈಚಾರಿಕ ದಿವಾಳಿತನವನ್ನ ತೋರಿಸುತ್ತದೆ.
ಶೀಘ್ರದಲ್ಲಿಯೇ ಬೆಂಬಲಿಗರ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ರಾಯಸಂದ್ರ ರವಿಕುಮಾರ್ ತಿಳಿಸಿದರು.
ಈ ವೇಳೆ ಯುವ ಮುಖಂಡರಾದ ಚಂದ್ರು,ಪ್ರಸಾದ್ ಉಪಸ್ಥಿತರಿದ್ದರು.







