ಒಡಿಶಾ ವಿರುದ್ಧ ಮುಂಬೈಗೆ ಇನಿಂಗ್ಸ್ ಮುನ್ನಡೆ

ಭುವನೇಶ್ವರ, ನ.2: ಮುಂಬೈನ ಮಧ್ಯಮ ವೇಗದ ಬೌಲರ್ ದಾಳಿಗೆ ತತ್ತರಿಸಿದ ಒಡಿಶಾ ತಂಡ ರಣಜಿ ಟ್ರೋಪಿ ‘ಸಿ’ ಗುಂಪಿನ ಪಂದ್ಯದಲ್ಲಿ ಕೇವಲ 145 ರನ್‌ಗೆ ಆಲೌಟಾಯಿತು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 144 ರನ್ ಮುನ್ನಡೆ ಪಡೆಯಿತು.
ಕೆಐಐಟಿ ಸ್ಟೇಡಿಯಂನಲ್ಲಿ ಗುರುವಾರ ನಡೆದ 2ನೆ ದಿನದಾಟದಲ್ಲಿ ಮುಂಬೈ ತಂಡದ ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್ ಹಾಗೂ ಅಭಿಷೇಕ್ ನಾಯರ್ ಏಳು ವಿಕೆಟ್‌ಗಳನ್ನು ಹಂಚಿಕೊಂಡರು. ಎಡಗೈ ಸ್ಪಿನ್ನರ್ ವಿಜಯ್ ಗೊಹಿಲ್ ಉಳಿದ 3 ವಿಕೆಟ್‌ಗಳನ್ನು ಕಬಳಿಸಿದರು. ಕುಲಕರ್ಣಿ ಹಾಗೂ ಠಾಕೂರ್ 3 ಓವರ್‌ಗಳಲ್ಲಿ ಒಡಿಶಾದ 2 ವಿಕೆಟ್‌ಗಳನ್ನು ಉಡಾಯಿಸಿದರು.
ಸಂತನು ಮಿಶ್ರಾ ಹಾಗೂ ಬಿಪ್ಲಬ್ ಸಮಂಟ್ರೆ 5ನೆ ವಿಕೆಟ್‌ಗೆ93 ರನ್ ಸೇರಿಸಿ ತಂಡವನ್ನು ಆಧರಿಸಿದರು. ಸಮಂಟ್ರೆ ಅಜೇಯ 72 ರನ್ ಗಳಿಸಿದರು.
6 ವಿಕೆಟ್‌ಗಳ ನಷ್ಟಕ್ಕೆ 264 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡ ನಿನ್ನೆಯ ಮೊತ್ತಕ್ಕೆ ಕೇವಲ 25 ರನ್ ಸೇರಿಸಿ ಆಲೌಟಾಯಿತು. ಒಡಿಶಾ ವೇಗಿ ಮೊಹಾಂತಿ 4 ವಿಕೆಟ್‌ಗಳನ್ನು ಕಬಳಿಸಿದರು.
ಒಡಿಶಾವನ್ನು ಮೊದಲ ಇನಿಂಗ್ಸ್‌ನಲ್ಲಿ 145 ರನ್‌ಗೆ ನಿಯಂತ್ರಿಸಿ ಎರಡನೆ ಇನಿಂಗ್ಸ್ ಆರಂಭಿಸಿರುವ ಮುಂಬೈ ದಿನದಾಟದಂತ್ಯಕ್ಕೆ 3 ವಿಕೆಟ್‌ಗಳ ನಷ್ಟಕ್ಕೆ 53 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಮುಂಬೈನ ಯುವ ಆರಂಭಿಕ ಆಟಗಾರ ಪೃಥ್ವಿ ಶಾ 45 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 46 ರನ್ ಗಳಿಸಿ ಔಟಾಗಿದ್ದಾರೆ.







