ಉಡುಪಿ: ಪೊಲೀಸರಿಂದ 10 ಕೆ.ಜಿ. ಗಾಂಜಾ ನಾಶ

ಉಡುಪಿ, ನ.3: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 10 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ಇಂದು ಎಸ್ಪಿ ಕಚೇರಿ ಆವರಣದಲ್ಲಿ ನಾಶಪಡಿಸಲಾಯಿತು.
ಎಸ್ಪಿ ಡಾ. ಸಂಜೀವ ಪಾಟೀಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಡ್ರಗ್ ಡಿಸ್‌ಪೋಸಲ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ದಂತೆ ಈ ಕ್ರಮ ಜರಗಿಸಲಾಯಿತು.
ಮಲ್ಪೆ ಠಾಣೆಯಲ್ಲಿ 1.25 ಕೆ.ಜಿ., ಉಡುಪಿ ನಗರ ಠಾಣೆಯಲ್ಲಿ 1.426 ಕೆ.ಜಿ., ಸೆನ್ ಪೊಲೀಸ್ ಠಾಣೆಯಲ್ಲಿ 2.938 ಕೆ.ಜಿ., ಮಣಿಪಾಲ ಠಾಣೆಯಲ್ಲಿ 1.361 ಕೆ.ಜಿ. ಮತ್ತು ಅಮಾಸೆಬೈಲು ಠಾಣೆಯಲ್ಲಿ ವಶಪಡಿಸಿಕೊಳ್ಳಲಾದ 4. 800 ಕೆ.ಜಿ. ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಪಿ ಡಾ.ಸಂಜೀವ ಪಾಟೀಲ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಕಾರ್ಕಳ ಸಹಾಯಕ ಎಸ್ಪಿ ಹೃಷಿಕೇಶ್ ಸೋನಾವನೆ ಮೊದಲಾದವರು ಉಪಸ್ಥಿತರಿದ್ದರು.
Next Story





