ಗಾಂಜಾ ಮಾರಾಟ: ಇಬ್ಬರ ಬಂಧನ
ಮೈಸೂರು, ನ.3: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಮಂಡಿ ಠಾಣೆ ಪೊಲೀಸರು ನ.1ರಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಡಿ ಪೊಲೀಸ್ ಠಾಣೆ ಸರಹದ್ದು ಮಂಡಿ ಮೊಹಲ್ಲಾದ ಹಝರತ್ ಬೇದಡಕ್ ಶಾವಲಿ ದರ್ಗಾ ರಸ್ತೆಯಲ್ಲಿರುವ ಮಾಂಸದ ಅಂಗಡಿಯ ಮುಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಸೈಯ್ಯದ್ ಶಫೀರ್ (24 ವರ್ಷ) ಮತ್ತು ಸೈಯ್ಯದ್ ತಬ್ರೇಜ್ (23 ವರ್ಷ) ಎಂಬವರನ್ನು ಬಂಧಿಸಿದ್ದು, ಇವರಿಂದ 250 ಗ್ರಾಂ ತೂಕದ ಗಾಂಜಾ ಹಾಗೂ 3,010 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸ್ ಇನ್ ಸ್ಪೆಪೆಕ್ಟರ್ ಆರ್. ಪ್ರಸನ್ನಕುಮಾರ್, ಎಎಸ್ಸೈ ಶಾಂತರಾಜು, ಸಿಬ್ಬಂದಿಯಾದ ಅನಿಲ್ ಕೆ ಶಂಕಪಾಲ್, ಅಸ್ಗರ್‍ಖಾನ್, ಪುರುಶೋತ್ತಮ ಮತ್ತು ಶೈಲೇಶ್ ಅವರು ಪಾಲ್ಗೊಂಡಿದ್ದರು.
Next Story





