ರಸ್ತೆ ಅಪಘಾತ: ಅಪರಿಚಿತ ಮಹಿಳೆ ಮೃತ್ಯು
ಶಿವಮೊಗ್ಗ, ನ.3: ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಹೊರವಲಯದ ಜೇಡಿಕಟ್ಟೆಯ ಟಿಎಂಎಇಎಸ್ ಕಾಲೇಜು ಬಳಿ ನಡೆದಿದೆ.
ಮೃತ ಮಹಿಳೆಯ ಹೆಸರು, ವಿಳಾಸ ಮತ್ತೀತರ ವಿವರಗಳು ಪತ್ತೆಯಾಗಿಲ್ಲ. ಮಹಿಳೆಗೆ ಸರಿಸುಮಾರು 35 ರಿಂದ 40 ವರ್ಷ ವಯೋಮಾನವಿದೆ. ಕೋಲು ಮುಖ, ಬೂದು ಬಣ್ಣದ ಸೀರೆ, ಕೆಂಪು ಬಣ್ಣದ ರವಿಕೆ ಧರಿಸಿದ್ದಾರೆ.
ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿರುವ ವಾಹನ ಚಾಲಕ ಹಾಗೂ ಮೃತಪಟ್ಟ ಮಹಿಳೆಯ ವಿವರ ಕಲೆ ಹಾಕಲು ಪೊಲೀಸರು ಕ್ರಮಕೈಗೊಂಡಿದ್ದಾರೆ.
ಈ ಸಂಬಂಧ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
Next Story





