ಝಾಕಿರ್ ನಾಯ್ಕ್ ಗಡಿಪಾರಿಗೆ ಕೋರಿ ಮಲೇಷ್ಯಾಕ್ಕೆ ಶೀಘ್ರ ಮನವಿ: ಕೇಂದ್ರ ಸರಕಾರ

ಹೊಸದಿಲ್ಲಿ, ನ.3: ಝಾಕಿರ್ ನಾಯ್ಕ್ ಗಡಿಪಾರಿಗೆ ಕೋರಿ ಭಾರತವು ಶೀಘ್ರವೇ ಮಲೇಷ್ಯಾಕ್ಕೆ ವಿಧ್ಯುಕ್ತ ಮನವಿಯನ್ನು ಸಲ್ಲಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಮುಂದಿನ ಎರಡು ವಾರಗಳಲ್ಲಿ ಮನವಿಯ ಸ್ವರೂಪವು ಸ್ಪಷ್ಟವಾಗಬಹುದು ಎಂದು ಹೇಳಿದರು.
ಝಾಕಿರ್ ನಾಯ್ಕ್ ಕಳೆದ ತಿಂಗಳು ಮಲೇಷ್ಯಾದ ಆಡಳಿತಾತ್ಮಕ ರಾಜಧಾನಿ ಪುತ್ರಜಯಾದ ಮಸೀದಿಯೊಂದರಲ್ಲಿ ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಬ್ರಿಟನ್‌ನಲ್ಲಿ ನಿಷೇಧಿಸಲ್ಪಟ್ಟಿರುವ ಝಾಕಿರ್ ನಾಯ್ಕ್ ಅವರಿಗೆ ಮಲೇಷ್ಯಾ ಕಾಯಂ ವಸತಿಯನ್ನು ನೀಡಿದೆ. ನಾಯ್ಕ್ 2016,ಜು.1ರಂದು ದೇಶವನ್ನು ತೊರೆದಿದ್ದರು.
Next Story





