ನ.13ರಿಂದ ಉದ್ಯಮಶೀಲತಾ ಕಾರ್ಯಾಗಾರ
ಬೆಂಗಳೂರು, ನ.2: ಪರಿಶಿಷ್ಟ ಜಾತಿ-ಪಂಗಡದ ಉದ್ಯಮಶೀಲರಿಗೆ ಜವಳಿ ಉದ್ಯಮದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಬಗ್ಗೆ ಹೆಚ್ಚುವರಿ ತಿಳಿವಳಿಕೆ ಮೂಡಿಸುವ ಸಲುವಾಗಿ ನ.13ರಿಂದ 18ರವರೆಗೆ ‘ಉದ್ಯಮಶೀಲತಾ ಅಭಿವೃದ್ಧಿ’ ಕಾರ್ಯಕ್ರಮವನ್ನು ಎಂ.ಎಸ್.ರಾಮಯ್ಯ ಯೂನಿವರ್ಸಿಟಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಈ ತರಬೇತಿಗೆ ಪರಿಶಿಷ್ಟ ಜಾತಿಯ 30 ಮತ್ತು ಪರಿಶಿಷ್ಟ ಪಂಗಡದ 30 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಆದ್ದರಿಂದ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಚಿಸುವವರು ನ.10ರೊಳಗೆ ತಮ್ಮ ಹೆಸರನ್ನು ಜಂಟಿ ನಿರ್ದೇಶಕರ ಕಚೇರಿ, ಕೈ ಮಗ್ಗ ಮತ್ತು ಜವಳಿ ಇಲಾಖೆ, ದಕ್ಷಿಣ ವಲಯ, (ಬೆಂಗಳೂರು) ನಂ. 39/2, 4ನೆ ಮಹಡಿ, ಎಎಸ್‌ಎನ್ ಭವನ, ಕೆಂಪೇಗೌಡ ರಸ್ತೆ, ಬೆಂಗಳೂರು-9ರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. 080-22382666 ನ್ನು ಸಂಪರ್ಕಿಸಲು ಬಹುದಾಗಿದೆ.
Next Story





