ಟ್ರಂಪ್ ಮಾಜಿ ಪ್ರಚಾರ ಮುಖ್ಯಸ್ಥರ ಗೃಹಬಂಧನ ಮುಂದುವರಿಕೆ

ವಾಶಿಂಗ್ಟನ್, ನ. 3: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾಜಿ ಪ್ರಚಾರ ಮುಖ್ಯಸ್ಥ ಹಾಗೂ ಸಹಾಯಕರೊಬ್ಬರ ಗೃಹ ಬಂಧನವನ್ನು ನ್ಯಾಯಾಧೀಶರೊಬ್ಬರು ಗುರುವಾರ ಮುಂದುವರಿಸಿದ್ದಾರೆ. ಅವರು ಹಣ ಬಿಳುಪು ಮಾಡಿದ ಹಾಗೂ ಇತರ ಆರೋಪಗಳನ್ನು ಎದುರಿಸುತ್ತಿದ್ದಾರೆ.
2016ರ ಜೂನ್‌ನಿಂದ ಆಗಸ್ಟ್‌ವರೆಗೆ ಟ್ರಂಪ್‌ರ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ 68 ವರ್ಷದ ಪೌಲ್ ಮನಫೋರ್ಟ್ ಮತ್ತು 45 ವರ್ಷದ ರಿಕ್ ಗೇಟ್ಸ್‌ರನ್ನು ಜಿಪಿಎಸ್ ನಿಗಾಕ್ಕೆ ಒಳಪಡಿಸುವುದನ್ನೂ ಮುಂದುವರಿಸಲಾಗುವುದು.
ಯುಕ್ರೇನಿಯದ ರಾಜಕಾರಣಿ ವಿಕ್ಟರ್ ಯನುಕೊವಿಚ್ ಮತ್ತು ಅವರ ಮಾಸ್ಕೊ ಪರ ರಾಜಕೀಯ ಪಕ್ಷಕ್ಕಾಗಿ ಕೆಲಸ ಮಾಡಿ ಸಂಪಾದಿಸಿದ ಮಿಲಿಯಗಟ್ಟಳೆ ಡಾಲರ್ ಹಣವನ್ನು ಅಡಗಿಸಿಟ್ಟ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
Next Story





