ಪಾಚಿ ತೆಗೆಯುವುದನ್ನು ನಿಷೇಧಿಸಲು ಆಗ್ರಹ
ಉಡುಪಿ, ನ.3: ಪಡುಕೆರೆ ಸಮುದ್ರ ದಡದ ಬಂಡೆಗಳಲ್ಲಿರುವ ಪಾಚಿ (ಅಜಿರ್)ಗಳನ್ನು ಅಕ್ರಮವಾಗಿ ತೆಗೆಯುತ್ತಿರುವ ಕೇರಳ ಹಾಗೂ ತಮಿಳುನಾಡಿ ನವರು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಪಡುಕೆರೆ ನಾಡದೋಣಿ ಮೀನುಗಾರರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಇಂದು ಮನವಿ ಸಲ್ಲಿಸಿದರು.
ಪಾಚಿ ಮೀನಿನ ಮುಖ್ಯ ಆಹಾರವಾಗಿದ್ದು, ಕಲ್ಲು ಅದರ ವಾಸ ಸ್ಥಾನವಾಗಿದೆ. ಇವರು ಹೀಗೆ ರಾತ್ರಿ ಹಗಲು ಎನ್ನದೆ ಪಾಚಿಯನ್ನು ತೆಗೆಯುತ್ತಿರುವುದರಿಂದ ಮೀನುಗಳು ಅಲ್ಲಿಗೆ ಬರುತ್ತಿಲ್ಲ. ಕಾನೂನು ಪ್ರಕಾರ ಪಾಚಿ ತೆಗೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದುದರಿಂದ ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಪಾಚಿ ತೆಗೆಯುವುದನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಸಂಘದ ಅಧ್ಯಕ್ಷ ಶಂಕರ್ ಕುಂದರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.
Next Story





