ಪುತ್ತೂರಿನಲ್ಲಿ ಕಾವ್ಯ ರಚನಾ ಕಮ್ಮಟಕ್ಕೆ ಆಹ್ವಾನ
ಮಂಗಳೂರು, ನ.3: ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ನ.26ರಂದು ಪುತ್ತೂರಿನ ಎಂ.ಟಿ.ರಸ್ತೆಯಲ್ಲಿರುವ ಸುದ್ದಿ ತರಬೇತಿ ಕೇಂದ್ರದಲ್ಲಿ ಕಾವ್ಯ ರಚನಾ ಕಮ್ಮಟವನ್ನು ಹಮ್ಮಿಕೊಂಡಿದೆ.
ಬೆಳಗ್ಗೆ 10ರಿಂದ ಸಂಜೆ 4ರ ತನಕ ನಡೆಯಲಿರುವ ಶಿಬಿರದಲ್ಲಿ ಕವಿಗಳಾದ ಬಿ. ಪುರಂದರ ಭಟ್, ಮುಹಮ್ಮದ್ ಬಡ್ಡೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕಮ್ಮಟ ಉದ್ಘಾಟಿಸಲಿದ್ದಾರೆ.
ಪ್ರವೇಶ ಉಚಿತವಾಗಿದ್ದು, ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಶಿಬಿರದ ಕೊನೆಯಲ್ಲಿ ಕವನ ರಚನಾ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಪ್ರತಿನಿಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ನ.15ರ ಒಳಗಾಗಿ ಮುಸ್ಲಿಮ್ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು -575001, (ದೂ.ಸಂ: 9449104162, 9845054191) ಹೆಸರು ನೋಂದಾಯಿಸಬಹುದು ಎಂದು ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





