ಮೊಬೈಲ್ ಅಂಗಡಿಗೆ ನುಗ್ಗಿ ಕಳವು
ಕೊಣಾಜೆ, ನ. 3: ಮುಡಿಪುವಿನ ಮೊಬೈಲ್ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ನಡೆಸಿರುವ ಘಟನೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮುಡಿಪು ಜಂಕ್ಷನ್ ಬಳಿ ಇರುವ ರವಿ ಎಂಬವರ ಮಾಲಕತ್ವದ ಮೊಬೈಲ್ ಅಂಗಡಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಕಳ್ಳರು ಮೊಬೈಲ್ ಅಂಗಡಿಯ ಶೆಟರ್ ಒಡೆದು ನುಗ್ಗಿ ಅಪಾರ ಮೌಲ್ಯದ ಮೊಬೈಲ್ ಹಾಗೂ ಇತರ ವಸ್ತುಗಳನ್ನು ಕಳ್ಳತನ ನಡೆಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,
Next Story





