ಶಾಸ್ತ್ರೀಯ ಭಾಷಾ ಮಾನ್ಯತೆಯಿದ್ದರೂ ಕನ್ನಡಕ್ಕೆ ಸಾಹಿತಿಗಳಿಂದ ಮಾನ್ಯತೆಯ ಕೊರತೆ: ವೀರಪ್ಪ ಮೊಯ್ಲಿ

ಮೂಡುಬಿದಿರೆ, ನ. 3: ವಿವಾದ ಹಾಗೂ ಹೋರಾಟ ಇವೆರಡಕ್ಕಿಂತಲೂ ಚೈತನ್ಯ ಅಗತ್ಯವಾಗಿದೆ. ಚೈತನ್ಯವಿದ್ದಾಗ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಅಭಿಮಾನ ಶೂನ್ಯತೆ ಇದ್ದಾಗ ಪ್ರಯೋಗ ಶೀಲತೆ ಇರುವುದಿಲ್ಲ. ಬಾಷೆಯ ಮೇಲೆ ಹಿಡಿತ ಇದ್ದಾಗ ಅದರ ಪ್ರಭುತ್ವ ಹೊಂದಲು ಸಾಧ್ಯ. ಹಿಂದುಳಿದ ವರ್ಗದವರಿಗೂ ಅವಕಾಶ ದೊರೆತಾಗ ಅಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮಲು ಅವಕಾಶ ಹೆಚ್ಚು . ಸ್ವರ್ಧೆ ಇದ್ದಾಗ ಅಲ್ಲಿ ಕ್ರಿಯಾಶೀಲತೆಗೆ ಹೆಚ್ಚಿನ ಒತ್ತು ನೀಡುವಂತಾಗುತ್ತದೆ ಎಂದು ಸಾಹಿತಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಕಾಂತಾವರ ಕನ್ನಡ ಸಂಘದಲ್ಲಿ ಕಾಂತಾವರ ಉತ್ಸವ-2007 ಎರಡನೇ ದಿನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕನ್ನಡ, ತೆಲುಗು ಬಾಷೆಗಳನ್ನು ಶಾಸ್ತ್ರೀಯ ಭಾಷೆಗಳ ಅಂಗ್ರಪಂಕ್ತಿಗೆ ಸೇರ್ಪಡೆ ಮಾಡಲಾಗಿದ್ದರೂ, ಕರ್ನಾಟಕ ಸರಕಾರ ಹಾಗೂ ಸಾಹಿತಿಗಳು ಯಾವುದೇ ಸ್ವಂದನೆ ನೀಡದಿರುವುದು ಖೇದಕರವಾಗಿದೆ ಎಂದರು. ಕಾಂತಾವರ ಉತ್ಸವ-2007 ಎರಡನೇ ದಿನದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೇಂದ್ರ ಸಚಿವನಾಗಿದ್ದ ಅವಧಿಯಲ್ಲಿ ಕೋರಿಕೆಯಂತೆ ಅಂದು ಪ್ರಧಾನಿ ಮನಮೋಹನ್ ಸಿಂಗ್ ಕನ್ನಡ, ತೆಲುಗು ಬಾಷೆಗಳಿಗೆ ಮಾನ್ಯತೆ ನೀಡಿದರು. ಆಂಧ್ರಪ್ರದೇಶದಲ್ಲಿ ಪಕ್ಷದ ಉಸ್ತುವಾರಿ ವಹಿಸಿದ ಹಿನ್ನೆಲೆಯಲ್ಲಿ ಆ ಕುರಿತು ತೆಲುಗಿಗೂ ಶಾಸ್ತ್ರೀಯ ಭಾಷೆ ಮಾನ್ಯತೆ ನೀಡಿಲು ಕೋರಿದೆ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧಕ್ಷೆ ಡಾ. ವಸುಂಧರಾ ಭೂಪತಿ ’ನಾಡಿಗೆ ನಮಸ್ಕಾರ’ ಗ್ರಂಥ ಮಾಲೆಯ ನೂತನ 21ಹೊತ್ತಗೆಗಳನ್ನು ಅನಾವರಣಗೊಳಿಸಿ ಮಾತನಾಡಿ, ಅಡಿಯೋ ಬುಕ್ ಗಳ ಮೂಲಕ ಸಾಹಿತ್ಯ ಪ್ರಸಾರಕ್ಕೆ ಪುಸ್ತಕ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ. ಅತ್ತಿಮಬ್ಬೆಯು 19 ನೇ ಶತಮಾನದಲ್ಲಿ ಪುಸ್ತಕ ಸಂಸ್ಕೃತಿಗೆ ಒತ್ತು ನೀಡಿ ಪುಸ್ತಕಗಳನ್ನು ಮುದ್ರಿಸಿ ಉಚಿತವಾಗಿ ಹಂಚಿದ್ದರು. ಪುಸ್ತಕಗಳಿಗೆ ಸಾವಿಲ್ಲ. ಪುಸ್ತಕ ಓದುವುದರಿಂದ ಮಾನಸಿಕ ಆಹ್ಲಾದಕರ ವಾತಾವರಣ ಹೆಚ್ಚಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಕಾಂತಾವರ ಕನ್ನಡ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್.ಕೂಡ್ಲು, ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ. ರಾಷ್ಟ್ರ ವ್ಯಾಪ್ತಿಯಲ್ಲಿ ಇದರ ಬಗ್ಗೆ ಅಭಿಯಾನ ನಡೆಯಬೇಕು. ವೈದ್ಯರು ಕೂಡಾ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡ ಬಾಷೆಯಲ್ಲಿ ವ್ಯವಹಾರ ನಡೆಸಬೇಕೆಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯಅತಿಥಿಯಾಗಿ ಪಾಲ್ಗೊಂಡರು.
ಅಪರಾಹ್ನ ಅರೆಹೊಳೆ ಪ್ರತಿಷ್ಠಾನದ ಅಧ್ಯ್ಕಷ ಅರೆಹೋಲೆ ಸದಾಶಿವ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ವೇತಾ ಅರೆಹೊಳೆ ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿದ್ದು, ಮಹತೀ ಕಾರ್ಕಳ ವಯೋಲಿನ್ ವಾದನ ನಡೆಯಿತು. ಸರೋಜಿ ನಾಗಪ್ಪಯ್ಯ, ವಿಠಲ ಬೇಲಾಡಿ ನಿರೂಪಣೆಗೈದರು. ನಾ.ಮೊಗಸಾಲೆ ಪ್ರಸ್ತಾವಿಕವಾಗಿ ಮಾತನಾಡಿದರು. ಸದಾನಂದ ನಾರಾವಿ ಸ್ವಾಗತಿಸಿ, ವಂದಿಸಿದರು.
ಚಿತ್ರ: 2 ಮೂಡ್ ಮೊಯಿಲಿ- ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್.ಕೂಡ್ಲು ಅವರನ್ನು ಮಾಜಿ ಮುಖ್ಯಮಂತ್ರಿ ವಾರ್ಷಿಕ ವಿಶೇಷ ಪ್ರಶಸ್ತಿಯೊಂದಿಗೆ ಗೌರವಿಸಿದರು.







