ದುಬೈಯಲ್ಲಿ ಅಪಘಾತ: ಮೂಡುಬಿದಿರೆ ಯುವಕ ಮೃತ್ಯು

ಮೂಡುಬಿದಿರೆ, ನ. 3: ಮ್ಯಾನ್ ಗ್ರೂಪ್ ಪಾಲುದಾರರಾಗಿರುವ ಗಂಟಾಲ್ಕಟ್ಟೆ ನಿವಾಸಿ ಪಿ.ಎಚ್. ಅಹ್ಮದ್ ಹುಸೈನ್ ಅವರ ಪುತ್ರ ರಿಯಾರ್ ಅಹ್ಮದ್ (25) ಗುರುವಾರ ದುಬೈಯ ಅಜ್ಮಾನ್‌ನಲ್ಲಿ ತನ್ನ ಮನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರು ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದು ದುಬೈಗೆ ತೆರಳಿದ್ದರು.
ಮೃತ ದೇಹವನ್ನು ಶನಿವಾರ ಊರಿಗೆ ತರಲಾಗುವ ನಿರೀಕ್ಷೆಯಿದ್ದು; ಪಡ್ಡಂದಡ್ಕ ಮಸೀದಿಯಲ್ಲಿ ದಫನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
Next Story





