ನ.11: ನಂದಿನಿ ಚಿತ್ರಕಲಾ ಸ್ಪರ್ಧೆ
ಉಡುಪಿ, ನ.3: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ‘ನಂದಿನಿ ಚಿತ್ರಕಲೆ ಸ್ಪರ್ಧೆ’ಯನ್ನು ಉಡುಪಿಯ ಕಿದಿಯೂರು ಹೋಟೇಲ್‌ನಲ್ಲಿ ನ.11ರಂದು ನಡೆಸಲು ನಿರ್ಧರಿಸಲಾಗಿದೆ. ಉಡುಪಿ ಜಿಲ್ಲೆಯ 5ರಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ ‘ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ’ ಎಂಬ ವಿಷಯದ ಬಗ್ಗೆ ಮತ್ತು 8ರಿಂದ 10 ನೆಯ ತರಗತಿಯ ಮಕ್ಕಳಿಗೆ ‘ಹೈನುಗಾರಿಕೆಯಿಂದ ಸ್ವಉದ್ಯೋಗ’ ಎಂಬ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಜಿಲ್ಲೆಯ ಎಲ್ಲಾ ಸರಕಾರಿ/ಅನುದಾನಿತ/ಖಾಸಗಿ ಶಾಲೆಯ ಮಕ್ಕಳು ಈ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಚಿತ್ರ ಬಿಡಿಸಲು ಬೇಕಾದ ಜಲವರ್ಣ(ವಾಟರ್‌ಕಲರ್) ಪರಿಕರಗಳನ್ನು ಉಚಿತವಾಗಿ ನೀಡಲಾಗುವುದು. ಮಕ್ಕಳು ತಮ್ಮ ಸ್ವಂತ ಪರಿಕರಗಳನ್ನು (ಡ್ರಾಯಿಂಗ್ ಶೀಟ್ ಹೊರತುಪಡಿಸಿ) ತಂದು ಉಪಯೋಗಿಸಬಹುದು.
ಪ್ರಶಸ್ತಿಯನ್ನು ಎರಡು ಗುಂಪುಗಳಿಗೆ ಪ್ರತ್ಯೇಕವಾಗಿ ನೀಡಲಾಗುವುದು. ಪ್ರಶಸ್ತಿ ವಿಜೇತ ಮಕ್ಕಳಿಗೆ ಪ್ರಥಮ ಬಹುಮಾನ 10,000ರೂ., ದ್ವಿತೀಯ ಬಹುಮಾನ 6,000 ರೂ. ಹಾಗೂ ತೃತೀಯಬಹುಮಾನ 3,000ರೂ. ನಗದು ಬಹುಮಾನ ಅಲ್ಲದೇ 15 ಸಮಾಧಾನಕರ ಬಹುಮಾನವಾಗಿ ತಲಾ 1,000 ರೂ. ನೀಡಲಾ ಗುವುದು. ಜೊತೆಗೆ ಸ್ಮರಣಿಕೆ ಹಾೂ ನಂದಿನಿ ಸಿಹಿತಿಂಡಿ ನೀಡಲಾಗುವುದು.
ಬೆಳಗ್ಗೆ 10ಕ್ಕೆ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ. 10:45ರಿಂದ ಅಪರಾಹ್ನ 12:15ರವರೆಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. 2:30ಕ್ಕೆ ಪ್ರಶಸ್ತಿ ವಿತರಣಾ ಹಾಗೂ ಸಮರೋಪ ಸಮಾರಂಭ ನಡೆಯಲಿದೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಶ್ರಯದಲ್ಲಿ ನಡೆಯುವ ನಂದಿನಿ ಚಿತ್ರಕಲೆ ಸ್ಪರ್ಧೆಯಲ್ಲಿ ಎಲ್ಲಾ ಶಾಲೆಗಳಿಂದ ಚಿತ್ರಕಲೆ ಆಸಕ್ತಿ ಇರುವ ಆಯ್ದ 2 ಮಕ್ಕಳನ್ನು ಆಯ್ಕೆ ಮಾಡಿ ನ.6ರೊಳಗೆ mplnandini17@gmail.comಗೆ ಅಥವಾ ಪತ್ರ ಮುಖೇನ ಕಳುಹಿಸಿಕೊಡ ಬಹುದು ಎಂದು ಪ್ರಕಟಣೆ ತಿಳಿಸಿದೆ.







