ರೆಂಜಲಾಡಿಯಲ್ಲಿ ವಿದ್ಯಾಸಂಸ್ಥೆ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು, ನ.3: ಸರ್ವೆ ಗ್ರಾಮದ ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಸಮೀಪ ಗುಣಮಟ್ಟದ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶಿಕ್ಷಣಗಳನ್ನೊಳಗೊಂಡ ಬಹುಮುಖಿ ವಿದ್ಯಾಸಂಸ್ಥೆಗೆ ಶಿಲಾನ್ಯಾಸ ಕಾರ್ಯವು ಶುಕ್ರವಾರ ನಡೆಸಲಾಯಿತು.
ಶಿಲಾನ್ಯಾಸ ನೆರವೇರಿಸಿದ ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಮಾತನಾಡಿ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಅಗತ್ಯತೆ ಇದೆ, ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಬಲ್ಲ ವಿದ್ಯಾ ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಆರಂಭಗೊಂಡಾಗ ತಳ ಮಟ್ಟದ ಬಡವರಿಗೂ ಅದರಿಂದ ಪ್ರಯೋಜನವಾಗುತ್ತದೆ ಈ ನಿಟ್ಟಿನಲ್ಲಿ ರೆಂಜಲಾಡಿಯಲ್ಲಿ ಪ್ರಾರಂಭಿಸಲು ಉದ್ದೆಶಿಸಿರುವ ವಿದ್ಯಾಸಂಸ್ಥೆಯು ಯಶಸ್ಸನ್ನು ಸಾಧಿಸಲಿದೆ ಎಂದು ಹೇಳಿದರು.
ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಂಜಲಾಡಿ ಮಸೀದಿಯ ಖತೀಬ್ ಹಾಜಿ ಅಬೂಬಕ್ಕರ್ ದಾರಿಮಿ, ಮಸೀದಿಯ ಪ್ರ.ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ, ಕೂಡುರಸ್ತೆ ಮಸೀದಿಯ ಖತೀಬ್ ಹಾಜಿ ಯಾಕೂಬ್ ದಾರಿಮಿ, ಮಸೀದಿಯ ಅಧ್ಯಕ್ಷ ಪಿ.ಕೆ ಮುಹಮ್ಮದ್ ಕೂಡುರಸ್ತೆ, ತಿಂಗಳಾಡಿ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಖಾಸಿಂ ಮುಸ್ಲಿಯಾರ್, ಹೈದರ್ ಹಾಜಿ ಮಡಂತ್ಯಾರ್, ಇಬ್ರಾಹಿಂ ಕಡ್ಯ, ರಹೀಂ ರೆಂಜಲಾಡಿ, ಜಿ.ಎ ಮುಹಮ್ಮದ್, ಗಲ್ಫ್ ಪ್ರತಿನಿಧಿಗಳಾದ ಉಮ್ಮರ್ ಸುಲ್ತಾನ್ ಹಾಗೂ ಅಬ್ದುಲ್ ನಾಸಿರ್, ಹಸೈನಾರ್, ಸಿದ್ದಿಕ್ ಸುಲ್ತಾನ್ ಕೂಡುರಸ್ತೆ, ಝೈನುದ್ದೀನ್, ಅಬ್ಬು ಹಾಜಿ, ಮಹಮ್ಮದ್ ಕೆಜಿಎನ್ ಮತ್ತಿತರರು ಉಪಸ್ಥಿತರಿದ್ದರು.







