ಎಸೆಸೆಲ್ಸಿ ಪರೀಕ್ಷೆ: ಶುಲ್ಕ ಪಾವತಿಯ ಅವಧಿ ವಿಸ್ತರಣೆ
ಬೆಂಗಳೂರು, ನ.3: 2018ನೆ ಮಾರ್ಚ್/ಎಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ನೋಂದಣಿ, ಪರೀಕ್ಷಾ ಶುಲ್ಕ ಹಾಗೂ ನಾಮಿನಲ್ ರೋಲ್ ಪ್ರಸ್ತಾವನೆಗಳನ್ನು ಸಲ್ಲಿಸುವ ದಿನಾಂಕಗಳನ್ನು ಕೆಳಕಂಡಂತೆ ಅಂತಿಮವಾಗಿ ವಿಸ್ತರಿಸಲಾಗಿದೆ.
NEFT ಖಾಸಗಿ ಅಭ್ಯರ್ಥಿಗಳಾಗಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ನ.10, ಶಾಲೆಯವರು ಶಾಲಾ, ಖಾಸಗಿ, ಪುನರಾವರ್ತಿತ ಅಭ್ಯರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕರಿಸಿ ಬ್ಯಾಂಕಿಗೆ ಚಲನ್ ಮೂಲಕ ಜಮೆ ನ.13, ನಾಮಿನಲ್ ರೋಲ್ ಪ್ರಸ್ತಾವನೆ ಹಾಗೂ ಬ್ಯಾಂಕ್ ಚಲನ್‌ನ ಮೂಲ ಪ್ರತೀ ಶಾಲೆಗಳಿಂದ ಮಂಡಳಿಗೆ ತಲುಪಿಸಲು ನ.14 ಅಂತಿಮ ದಿನವಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Next Story





