ಉಡುಪಿ: ಖಾಸಗಿ ವೈದ್ಯರ ಸಂಪೂರ್ಣ ಬಂದ್ ಯಶಸ್ವಿ; ಜಿಲ್ಲಾಸ್ಪತ್ರೆಯ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ

ಉಡುಪಿ, ನ.3: ರಾಜ್ಯ ಸರಕಾರ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರುಗಳ ಮೇಲೆ ಹೇರಲಿಚ್ಛಿಸಿರುವ ‘ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ’ (ಕೆಪಿಎಂಇ ಆ್ಯಕ್ಟ್) ಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿರುವ ರಾಜ್ಯಬಂದ್‌ಗೆ ಉಡುಪಿ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮಣಿಪಾಲದ ಕೆಎಂಸಿ ಆಸ್ಪತ್ರೆಯನ್ನು ಹೊರತು ಪಡಿಸಿ ಉಳಿದೆಲ್ಲಾ ಖಾಸಗಿ ಆಸ್ಪತ್ರೆಗಳನ್ನು ತಮ್ಮೆಲ್ಲಾ ಸೇವೆಗಳನ್ನು ಸಂಪೂರ್ಣವಾಗಿ 24 ಗಂಟೆ ಸ್ಥಗಿತ ಗೊಳಿಸಿದ್ದರೆ, ಕೆಎಂಸಿಯಲ್ಲಿ ಮಾತ್ರ ಕೇವಲ ತುರ್ತು ಸೇವೆಯನ್ನು ನೀಡಲಾಗುತ್ತಿದೆ. ಇಲ್ಲಿ ಹೊರರೋಗಿ ವಿಭಾಗ ಸೇರಿದಂತೆ ಉಳಿದೆಲ್ಲಾ ಸೇವೆ ಗಳನ್ನು ಸ್ಥಗಿತಗೊಳಿಸಲಾಗಿದೆ. ಕೆಎಂಸಿ ಆಸ್ಪತ್ರೆ ತನ್ನ ವೈದ್ಯಕೀಯ ಸೇವೆಯನ್ನು ನಿಲ್ಲಿಸಿ ಬಂದ್‌ಗೊಳ್ಳುತ್ತಿರುವುದು ಅದರ ಆರು ದಶಕಗಳ ಸೇವೆಯಲ್ಲಿ ಇದೇ ಮೊದಲು ಎನ್ನಲಾಗಿದೆ.
ಅದೇ ರೀತಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 800ಕ್ಕೂ ಅಧಿಕ ಮಂದಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ ವೈದ್ಯರು ತಮ್ಮ ಕ್ಲಿನಿಕ್, ಡಿಸ್ಪೆನ್ಸರಿಗಳನ್ನು ಮುಚ್ಚಿ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಐಎಂಎಯ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷ ಡಾ.ವೈ. ಸುದರ್ಶನ್ ರಾವ್ ತಿಳಿಸಿದ್ದಾರೆ.
ಅದೇ ರೀತಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 800ಕ್ಕೂ ಅಧಿಕ ಮಂದಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ ವೈದ್ಯರು ತಮ್ಮ ಕ್ಲಿನಿಕ್, ಡಿಸ್ಪೆನ್ಸರಿಗಳನ್ನು ಮುಚ್ಚಿ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಟನೆಯಲ್ಲಿಪಾಲ್ಗೊಂಡಿದ್ದಾರೆಎಂದುಐಎಂಎಯಉಡುಪಿ-ಕರಾವಳಿಶಾಖೆಯಅ್ಯಕ್ಷ ಡಾ.ವೈ. ಸುದರ್ಶನ್ ರಾವ್ ತಿಳಿಸಿದ್ದಾರೆ. ಖಾಸಗಿ ವೈದ್ಯರು ಹಾಗೂ ಆಸ್ಪತ್ರೆಗಳ ಪಾಲಿಗೆ ಕರಾಳವೆನಿಸಿದ ಈ ಮಸೂದೆ ಜಾರಿಗೊಂಡರೆ ಅವರು ವೃತ್ತಿಯಲ್ಲಿ ಮುಂದುವರಿಯುವುದು ಸಾಧ್ಯವೇ ಇಲ್ಲ. ನಮ್ಮ ಸೇವೆಯ ಮಹತ್ವವನ್ನು ಜನರಿಗೆ ಹಾಗೂ ಸರಕಾರಕ್ಕೆ ಮನದಟ್ಟು ಮಾಡುವ ಏಕೈಕ ಉದ್ದೇಶದಿಂದ ನಾವು ತುರ್ತು ಸೇವೆ ಸೇರಿದಂತೆ ಉಳಿದಂತೆ 24ಗಂಟೆಗಳ ಕಾಲ ಹೊರರೋಗಿ ವಿಭಾಗ, ಒಳರೋಗಿ ವಿಭಾಗದ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಡಾ.ರಾವ್ ನುಡಿದರು.
ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ: ಖಾಸಗಿ ಆಸ್ಪತ್ರೆಗಳು ಮುಚ್ಚಿರುವುದರಿಂದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ರೋಗಿ ಗಳ ಸಂಖ್ಯೆಯಲ್ಲಿ ಎಂದಿಗಿಂತ ಶೇ.20ರಿಂದ 30ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ನಾವು ಇಂದಿನ ಸನ್ನಿವೇಶಕ್ಕೆ ಸನ್ನದ್ಧರಾಗಿದ್ದೆವು. ಜಿಲ್ಲಾಸ್ಪತ್ರೆಯ ವೈದ್ಯರು, ತಜ್ಞ ವೈದ್ಯರು, ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಸೇರಿದಂತೆ ಎಲ್ಲರ ರಜೆಯನ್ನು ಗುರುವಾರ-ಶುಕ್ರವಾರ-ಶನಿವಾರ ರದ್ದುಗೊಳಿಸಿದ್ದು ಎಲ್ಲರೂ ತಪ್ಪದೇ ಸೇವೆಗೆ ಹಾಜರಿರುವಂತೆ ಆದೇಶಿಸಿದ್ದೇವೆ. ಇದರಿಂದ ಎಲ್ಲರೂ ಸೇವೆಗೆ ಲಭ್ಯವಿದ್ದು, ಎಷ್ಟೇ ಮಂದಿ ರೋಗಿಗಳು, ತುರ್ತು ಸೇವೆಗೆ ಬಂದರೂ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಲಿದೆ ಎಂದು ಡಾ.ನಾಯಕ್ ತಿಳಿಸಿದರು.
ಆಸ್ಪತ್ರೆಯ 25 ಮಂದಿ ತಜ್ಞ ವೈದ್ಯರು ಸೇರಿದಂತೆ 28 ಮಂದಿ ವೈದ್ಯರು ಸೇವೆಯಲ್ಲಿದ್ದು, ಅವರಿಗೆ ಕೇಂದ್ರಸ್ಥಾನ ಬಿಟ್ಟು ತೆರಳದಂತೆ, ತುರ್ತು ಕರೆ ಬಂದಾಗ ತಕ್ಷಣ ಸೇವೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಕಾರ್ಕಳ, ಕುಂದಾಪುರದಿಂದಲೂ ಇಂದು ಸಾಕಷ್ಟು ಮಂದಿ ಚಿಕಿತ್ಸೆಗೆ ಬಂದಿದ್ದಾರೆ ಎಂದು ಅವರು ಹೇಳಿದರು.
ಕಾಣದ ಹೆಚ್ಚಳ: ಜಿಲ್ಲೆಯಲ್ಲಿರುವ 61 ಪ್ರಾಥಮಿಕ ಆರೋಗ್ಯ ಕೇಂದ್ರ, ಆರು ಸಮುದಾಯ ಆರೋಗ್ಯ ಕೇಂದ್ರ, ಎರಡು ತಾಲೂಕು ಆಸ್ಪತ್ರೆ ಗಳಲ್ಲೂ ರೋಗಿಗಳ ಸೇವೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೇವೆಯಲ್ಲಿ ರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಇಂದು ಕೆಲಸಕ್ಕೆ ಹಾಜರಾಗಿದ್ದರು. ಆದರೆ ಇಂದು ಹೊರರೋಗಿಗಳ ಸಂಖ್ಯೆಯಲ್ಲಿ ವಿಶೇಷ ಹೆಚ್ಚಳ ಕಂಡುಬಂದಿಲ್ಲ. ಖಾಸಗಿಯವರ ಮುಷ್ಕರದ ಬಗ್ಗೆ ಜನರಿಗೆ ಮಾಹಿತಿ ತಲುಪಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ರೋಹಿಣಿ ತಿಳಿಸಿದರು.
ಜಿಲ್ಲಾಸ್ಪತ್ರೆಯನ್ನು ಹೊರತು ಪಡಿಸಿ ಪ್ರಾಥಮಿಕ ಮಾಹಿತಿಯಂತೆ ಸುಮಾರು 3000 ಮಂದಿ ಇಂದು ವಿವಿಧ ಸರಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬಂದಿದ್ದು, ಇವರಲ್ಲಿ ಉಡುಪಿ ತಾಲೂಕಿನಲ್ಲಿ 1245, ಕುಂದಾಪುರದಲ್ಲಿ 405 ಹಾಗೂ ಕಾರ್ಕಳದಲ್ಲಿ 1074ಮಂದಿ ಭೇಟಿ ನೀಡಿದ್ದಾರೆ. ಎಲ್ಲೂ ಜನರಿಗೆ ಸಮಸ್ಯೆ, ತೊಂದರೆ ಎದುರಾದ ಬಗ್ಗೆ ಮಾಹಿತಿಗಳು ಬಂದಿಲ್ಲ ಎಂದವರು ಹೇಳಿದರು.
ಇಂದು ಬೆಳಗ್ಗೆ ಕೊಲ್ಲೂರು ಬಳಿ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದು ಅಫಘಾತಕ್ಕಿಡಾಗಿದ್ದು, ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ ಬಳಿಕ ಮಣಿಪಾಲದ ಕೆಎಂಸಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಅವರೀಗ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
‘ವೃತ್ತಿ ತ್ಯಾಗಕ್ಕೆ ವೈದ್ಯರ ಒಕ್ಕೊರಲ ನಿರ್ಧಾರ’
ಇಂದು ಅಜ್ಜರಕಾಡಿನ ಐಎಂಎ ಭವನದಲ್ಲಿ ಖಾಸಗಿ ವೈದ್ಯರ ಪ್ರತಿಭಟನಾ ಸಭೆಯೊಂದು ನಡೆದಿದ್ದು, ಇದರಲ್ಲಿ ಜಿಲ್ಲೆಯ 400ಕ್ಕೂ ಅಧಿಕ ವೈದ್ಯರು ಹಾಗೂ ಆಸ್ಪತ್ರೆಗೆ ಸಂಬಂಧಿಸಿದ ಇತರರು ಪಾಲ್ಗೊಂಡಿದ್ದು, ಇದರಲ್ಲಿ ರಾಜ್ಯ ಸರಕಾರ ತರಲುದ್ದೇಶಿಸಿರುವ ಕರಾಳ ಮಸೂದೆಯ ಕುರಿತು ಎಲ್ಲರಿಗೂ ವಿವರಿಸಲಾ ಯಿತು ಎಂದು ಐಎಂಎ ಉಡುಪಿ ಕರಾವಳಿ ಶಾಖೆ ಅಧ್ಯಕ್ಷ ಡಾ.ವೈ.ಸುದರ್ಶನ್ ರಾವ್ ತಿಳಿಸಿದರು.
ಇಂದಿನ ನಮ್ಮ ಒಗ್ಗಟ್ಟಿನ ಪ್ರತಿಭಟನೆ, ಮನವಿಯ ಹೊರತಾಗಿಯೂ ಸರಕಾರ ಮಸೂದೆಯನ್ನು ಪುನರ್‌ಪರಿಶೀಲಿಸಲು ಒಪ್ಪದಿದ್ದರೆ, ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿ, ವೃತ್ತಿ ತ್ಯಾಗಕ್ಕೆ ಒಕ್ಕೊರಳ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯದ ಕುರಿತು ರಾಜ್ಯ ಸಂಘಟನೆಯೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಇಂದು ಸಭೆಯ ಬಳಿಕ ಐಎಂಎ ನಿಯೋಗ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ಸಲ್ಲಿಸಿದೆ. ಮನವಿಯಲ್ಲಿ ಮಸೂದೆಯನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಿಲಾಗಿದೆ ಎಂದು ಡಾ.ರಾವ್ ತಿಳಿಸಿದರು.







