ನ. 5: ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ ಸ್ಫಟಿಕ ಮಹೋತ್ಸವ
ಮಂಗಳೂರು, ನ. 4: ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ 15ನೆ ಸಂಭ್ರಮಾಚರಣೆಯ ಸ್ಫಟಿಕ ಮಹೋತ್ಸವದ ಉದ್ಘಾಟನೆಯು ನ. 5ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಶಾನುಭೋಗನಹಳ್ಳಿ ಬಣ್ಣೇರುಗಟ್ಟ ದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಫಿಝಾ ಸಮೂಹ ಸಂಸ್ಥೆಯ ಸಹಕಾರದೊಂದಿಗೆ ಅನಾಥ ನಿರ್ಗತಿಕರ ಕೇಂದ್ರ ‘ಆಯಿಷಮ್ಮ ಮೆಮೋರಿಯಲ್’ ಕಟ್ಟಡದ ಉದ್ಘಾಟನೆ ಮತ್ತು ಹಾಜಿ ಹಾಮನ್ ಬಾವ ಮೆಮೋರಿಯಲ್ ‘ಸಅದಿಯ ಹ್ಯಾಪಿ ಲಿವಿಂಗ್ ರೆನ್’ಗೆ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸೈಯದ್ ಆಟಕೋಯ ತಂಙಳ್ ಕುಂಬೋಳ್, ಸೈಯದ್ ಶಂಸುಲ್ ಹಖ್ ಖಾದ್ರಿ ಅಲ್‌ಹುಸೇನಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಬಿ.ಎಂ.ಫಾರೂಕ್, ಇಸ್ಮಾಯೀಲ್ ಸಖಾಫಿ ಕೊಂಡಂಗೇರಿ, ಶಾಸಕ ಮೊಯ್ದಿನ್ ಬಾವ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





