ದಾವಣಗೆರೆ: ಮನೆ-ಮನೆಗೆ ಕಾಂಗ್ರೆಸ್ ಅಭಿಯಾನ

ದಾವಣಗೆರೆ, ನ.3: 3ನೆ ವಾರ್ಡ್‍ನ ಮಹಬೂಬ್ ನಗರ, ಬಾಷಾ ನಗರದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮನೆ-ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮನೆ-ಮನೆಗೆ ತೆರಳಿ ಪಕ್ಷದ ಸಾಧನೆಗಳ ಕೈಪಿಡಿ ನೀಡಿ ಬಳಿಕ ಮಾತನಾಡಿದ ಡಾ.ಶಾಮನೂರು ಶಿವಶಂಕರಪ್ಪ, ಕಳೆದ 5 ವರುಷಗಳ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ತಮಗೆ ನೀಡಿದ ಪ್ರಣಾಳಿಕೆಯ ಭರವಸೆಯಂತೆ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇಂದು ಆ ಕಾರ್ಯಕ್ರಮಗಳ ವಿವರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಎಂದರು.
ಇದೇ ವೇಳೆ ಮಳೆುಂದ ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾಪೌರರಾದ ಅನಿತಾಬಾಯಿ ಮಾಲತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ದಿಲ್‍ಷಾದ್ ಶೇಕ್ ಅಹ್ಮದ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡ ಸೈಯದ್ ಸೈಪುಲ್ಲಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಖಾಲಿದ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಮಹೆಬೂಬ್ ಖಾನ್, ಮುಖಂಡರುಗಳಾದ ಶೇಕ್ ಅಹ್ಮದ್, ಜಾಕೀರ್ ಅಲಿ, ಮೈನುದ್ದೀನ್, ಮುಜಾಹಿದ್, ಸದ್ದಾಂ, ಎಂ.ದಾದಾಪೀರ್, ಹಸೇನ್ ಸಾಬ್, ನಜೀರ್ ಸಾಬ್ ಮತ್ತಿತರರಿದ್ದರು.







