ರೈಲು ಢಿಕ್ಕಿಯಾಗಿ ಅಪರಿಚಿತ ಮೃತ್ಯು: ಪತ್ತೆಗೆ ಮನವಿ

ಉಡುಪಿ, ನ. 3: ಇಂದ್ರಾಳಿ ರೈಲ್ವೆ ನಿಲ್ಧಾಣದ ಬಳಿ ಸುಮಾರು 65 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ರೈಲ್ವೆ ಹಳಿಯ ಮೇಲೆ ರೈಲು ಢಿಕ್ಕಿ ಹೊಡೆದು ಛೀದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯಲ್ಲಿ ಕಾರ್ಡ್ ಪತ್ತೆಯಾಗಿದ್ದು, ಹೆಸರು ಪಾಂಡುರಂಗ ನಾರಾಯಣ ಶೆಟ್ಟಿ, ಜೈನ್ ಟೆಂಪಲ್ ರೋಡ್ ಮುಂಬೈ ವಿಳಾಸ ಪತ್ತೆಯಾಗಿದೆ.
ಘಟನೆಗೆ ಸ್ವಷ್ಟ ಕಾರಣ ತಿಳಿದು ಬಂದಿಲ್ಲ. ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದ್ದಾರೆ. ವಾರಸುದಾರರು ಮಣಿಪಾಲ ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





