ಸ್ವಾತಂತ್ರ್ಯ ಹೋರಾಟಗಾರ ಭಂಡಿಕಾಂತರಾಜುಶೆಟ್ಟಿ ನಿಧನ

ಕಡೂರು, ನ. 4: ಸ್ವಾತಂತ್ರ್ಯ ಹೋರಾಟಗಾರ ಮತ್ತು ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡ ಭಂಡಿಕಾಂತರಾಜುಶೆಟ್ಟಿ (82) ಶನಿವಾರ ನಿಧನರಾಗಿದ್ದಾರೆ.
ಮೃತರು ಬೀರೂರು ಆರ್ಯವೈಶ್ಯ ಸಮಾಜದ 20 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಭಂಡಿಕಾಂತರಾಜುಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಮೈಸೂರು ಅರಮನೆ ಆವರಣದಲ್ಲಿ ಬಾವುಟ ಹಾರಿಸಲು ಹೋದ ಸಂದರ್ಭ 2 ದಿನ ಜೈಲು ವಾಸ ಅನುಭವಿಸಿದ್ದರು.
ಮೃತರು ಐದು ಹೆಣ್ಣು ಮಕ್ಕಳು, ಓರ್ವ ಪುತ್ರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಶನಿವಾರ ಪಟ್ಟಣದ ಆರ್ಯವೈಶ್ಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬೆಳ್ಳಿಪ್ರಕಾಶ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಉಪೇಂದ್ರನಾಥ್, ಟಿ.ಆರ್. ಲಕ್ಕಪ್ಪ, ಧನಂಜಯ ಮೃತರ ಅಂತಿಮ ದರ್ಶನ ಪಡೆದರು.
Next Story





