Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಪದಗಳು ತುಂಬಿದ ಕವನವಿದಲ್ಲ... ಹೃದಯವೇ...

ಪದಗಳು ತುಂಬಿದ ಕವನವಿದಲ್ಲ... ಹೃದಯವೇ ಅಡಗಿದೆ ಇದರಲಿ...

ರಾಘವನ್ ಚಕ್ರವರ್ತಿರಾಘವನ್ ಚಕ್ರವರ್ತಿ4 Nov 2017 7:42 PM IST
share
ಪದಗಳು ತುಂಬಿದ ಕವನವಿದಲ್ಲ... ಹೃದಯವೇ ಅಡಗಿದೆ ಇದರಲಿ...

ಜಾನಕಿಯ ಗಾನ ಯಾನವು ಯಶಸ್ಸಿನ ಶಿಖರವೇರುತ್ತಾ ಹೋದಂತೆ ಅವರು ಸರಳರಾಗುತ್ತಾ, ವಿನೀತರಾಗುತ್ತಾ ಹೋದರು. ಭಾರತೀಯ ಚಿತ್ರರಂಗದ ಮಹಾನ್ ವ್ಯಕ್ತಿಗಳ, ಸಾಧಕರ ಸಾಲಿನಲ್ಲಿ ಎಸ್.ಜಾನಕಿಗೆ ನಿಸ್ಸಂಶಯವಾಗಿ ಒಂದು ಗೌರವದ ಸ್ಥಾನವಿರುತ್ತದೆ.

‘ನಾಮೆಚ್ಚಿದ ಹುಡುಗ’ ಚಿತ್ರದ ಆರ್.ಎನ್. ಜಯಗೋಪಾಲ್‌ರ ಈ ಮೇಲಿನ ಸಾಲುಗಳನ್ನು ಅನುಭವಿಸಿ ಹಾಡಿದ ಜಾನಕಿಯವರ ಬಹುತೇಕ ಗೀತೆಗಳಿಗೂ ಈ ಸಾಲುಗಳು ಅನ್ವಯವಾಗುತ್ತವೆ. ಜಾನಕಿ ಹಾಡಿದ್ದು ಬರಿಯ ಶುಷ್ಕ ಪದಗಳಲ್ಲ. ಆ ಗಾಯನದಲ್ಲಿ ಅವರ ಒಳ ದನಿಯೂ ಇತ್ತು.

ದಶಕಗಳಿಂದ ಆಬಾಲವೃದ್ಧರಾದಿಯಾಗಿ, ಜಾತಿ-ವರ್ಣಗಳ ಹಂಗಿಲ್ಲದೇ, ಕೋಟ್ಯಂತರ ಕೇಳುಗರನ್ನು ತಮ್ಮ ವಿಭಿನ್ನ-ಸುಶ್ರಾವ್ಯ ಧ್ವನಿಯಿಂದ ರಂಜಿಸಿದ, ನಮ್ಮ ಕುಟುಂಬದ ಒಬ್ಬರೇನೋ ಎನಿಸಿದ್ದ ಎಸ್.ಜಾನಕಿ, ತಾವಿನ್ನು ಹಾಡುವುದಿಲ್ಲ ಎಂದಿದ್ದಾರೆ. ‘ವಯಸ್ಸಾಯಿತು’ ಎಂದು ಹಾಡುವುದನ್ನು ನಿಲ್ಲಿಸಿದ ಜಾನಕಿ, ಇತ್ತೀಚಿನ ವರ್ಷಗಳಲ್ಲಿ ಹಾಡಿದ್ದು ಕಡಿಮೆ. ವರ್ಷಗಳಿಂದಲೇ ತೆರೆಮರೆಗೆ ಸರಿದಿದ್ದ ಜಾನಕಿಯವರ ಧ್ವನಿಯಲ್ಲಿ ಮೊದಲಿನ ಮೋಹಕತೆ ಇರಲಿಲ್ಲ ಎಂಬುದೂ ನಿಜ.

ಸದಾಶಿವಯ್ಯ-ಕಣ್ಣದಾಸನ್-ಉದಯಶಂಕರ್-ಪ್ರಭಾಕರ ಶಾಸ್ತ್ರಿ- ಜಯಗೋಪಾಲ್-ವಾಲಿ-ವೈರಮುತ್ತು-ವೇಟೂರಿ...ಹೀಗೆ ಯಾವುದೇ ಗೀತರಚನಾಕಾರರಾಗಿರಲಿ, ಅವರ ಅರ್ಥಪೂರ್ಣ ಸಾಲುಗಳಿಗೆ ಜಾನಕಿ ಧ್ವನಿಯಾಗಬೇಕು. ಚಲಪತಿ ರಾವ್ ರಿಂದ ಹಂಸಲೇಖ-ಮಾಧವಪೆಡ್ಡಿ ಸುರೇಶ್-ರಹಮಾನ್ ವರೆಗೂ ಎಲ್ಲಾ ಪೀಳಿಗೆಯ ಸ್ವರ ಸಂಯೋಜಕರಿಗೂ ಜೀವಧ್ವನಿಯಾದ ಜಾನಕಿಯವರ ಗಾನ ಪ್ರತಿಭೆಯನ್ನು ಅದ್ಭುತವಾಗಿ ಅನಾವರಣಗೊಳಿದ ಕನ್ನಡ ಸ್ವರಸಂಯೋಜಕರಲ್ಲಿ ಆರ್.ರತ್ನ-ಜೀಕೆ ವೆಂಕಟೇಶ್-ವಿಜಯಭಾಸ್ಕರ್-ರಾಜನ್ ನಾಗೇಂದ್ರ, ಪ್ರಮುಖರು. ಆದರೆ ಜಾನಕಿಯವರ ಸ್ಮರಣೀಯ ಎಂಬಂತಹ ಹಲವು ಸಂಯೋಜನೆಗಳನ್ನು ನೀಡಿದವರಲ್ಲಿ ಇಳಯರಾಜ ನಿಸ್ಸಂದೇಹಾಸ್ಪದವಾಗಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಜಾನಕಿಯವರಿಗೆ ಬಂದ ನಾಲ್ಕು ರಾಷ್ಟ್ರಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳು ಇಳಯರಾಜಾರ ಸ್ವರಸಂಯೋಜನೆಯಿಂದ ಬಂದದ್ದು. ಮಳಯಾಲಂನ ಬಾಬುರಾಜ್‌ಗೆ ಅತ್ಯಂತ ಪ್ರೀತಿ-ಗೌರವ ಪಾತ್ರರಾಗಿದ್ದ ಜಾನಕಿ, ಮಲಯಾಳಿಗಳಲ್ಲೂ ಮನೆಮಾತಾದರು. ಬಾಬುರಾಜ್-ಜಾನಕಿ, ಹಿಂದಿಯ ಮದನ್ ಮೋಹನ್-ಲತಾ ರಿಗೆ ಸರಿಸಮನಾದ ಜೋಡಿಯಾಗಿತ್ತು.

‘ಮರೆಯಾದ ಹಾಡು’ವಿನ ‘ಭುವನೇಶ್ವರಿಯ ನೆನೆಮಾನಸವೇ (ಜೀಕೆವೆಂ), ‘ಹೇಮಾವತಿ’ಯ ‘ಶಿವ ಶಿವ ಎನ್ನದ ನಾಲಿಗೆ ಏಕೆ’ (ಎಲ್. ವೈದ್ಯನಾಥನ್), ‘ಋತುಗಾನ’ದ ‘ಅಭಿನಯ ರಸರಾಗ ರಂಜನೆ’ (ಗುಣಸಿಂಗ್), ನನ್ನ ವೈಯಕ್ತಿಕ ಮೆಚ್ಚಿನ ಆಯ್ಕೆಗಳು. ‘ಮರೆಯದ ಹಾಡಿ’ನ ಗೀತೆಯಂತೂ ಜಾನಕಿಯವರ ಎವರ್ ಗ್ರೀನ್ ಗೀತೆಗಳಲ್ಲಿ ಪ್ರಮುಖವಾದದ್ದು. ತಮಿಳಿನ ಹಲವು ಸಂದರ್ಶನಗಳಲ್ಲೂ ಜಾನಕಿ ನಿರ್ವಂಚನೆಯಿಂದ ಇದನ್ನು ಹೇಳಿಕೊಂಡಿದ್ದಾರೆ.

ಎಸ್. ಜಾನಕಿ, ವಾಣಿ ಜಯರಾಂ, ಎಂ.ಎಸ್ ಸುಬ್ಬುಲಕ್ಷ್ಮೀ ಮತ್ತಿತರ ಗಾಯಕಿಯರ ಸ್ನೇಹ ಸಮ್ಮೀಲನ

ಪುಟ್ಟಣ್ಣನವರ ’ಉಪಾಸನೆ’ ಚಿತ್ರದಲ್ಲಿ ‘ಸಾರಮತಿ’ ರಾಗ ಆಧರಿಸಿ ವಿಜಯಭಾಸ್ಕರ್ ಸ್ವರಕಲ್ಪನೆಯಲ್ಲಿ ಮೂಡಿಬಂದ ಎಲ್ಲಾ ಗೀತೆಗಳೂ ಕೇಳುಗರ ಮನಃಪಟಲದಲ್ಲಿ ಸದಾ ಹಸಿರು. ’ಗೆಜ್ಜೆಪೂಜೆ’ಯ ‘ಪಂಚಮವೇದ ಪ್ರೇಮದ ನಾದ’ ಸ್ವಲ್ಪ ಕೀಚೆನಿಸಿದರೂ ಇಷ್ಟವಾಗುತ್ತದೆ. ಆದರೂ, ಶಾಸ್ತ್ರೀಯ ಸಂಗೀತ ಆಧರಿಸಿದ ಗೀತೆಗಳಲ್ಲಿ ವಾಣಿ ಜಯರಾಂ ಸ್ವರಶುದ್ದಿಯಲ್ಲಿ ಮುಂದಿದ್ದಾರೆನಿಸುತ್ತದೆ. ‘ಶಂಕರಾಭರಣಂ’ನ ಗಾಯನಕ್ಕೆ ಕೆ.ವಿ.ಮಹದೇವನ್, ವಾಣಿಜಯರಾಂರಿಗೆ ಆದ್ಯತೆ ನೀಡಿದ್ದು ಇದೇ ಕಾರಣಕ್ಕೆ. ಏನೇ ಇರಲಿ, ‘ದೇವರ್ ಮಗನ್’ ಚಿತ್ರದಲ್ಲಿನ ‘ಇಂಜಿ ಇಡುಪಳಗಿ’ ಗೀತೆಯನ್ನು, ಜಾನಕಿಯಲ್ಲದೇ ಇನ್ನ್ಯಾವ ಭಾರತೀಯ ಗಾಯಕಿಯೂ ಹಾಡಲಾರರು. ಸನ್ನಿವೇಶದ ಮೂಡ್‌ಗೆ ತಕ್ಕಂತೆ, ರೇವತಿಯ ಮುಗ್ಧ ಪಾತ್ರಕ್ಕೆ ಹೊಂದುವಂತೆ ಇಳಯರಾಜಾ ಸಂಯೋಜಿಸಿದ ಈ ಗೀತೆಗೆ ನಿರಾಯಾಸವಾಗಿ ರಾಷ್ಟ್ರಪ್ರಶಸ್ತಿ ದೊರಕಿತು.

‘ಕವಿಕ್ಕುಯಿಲ್’ (1977) ತಮಿಳು ಚಿತ್ರಕ್ಕೆ ಜಾನಕಿ ಹಾಡಿದ ಪಂಜು ಅರುಣಾಚಲಂರ ‘ಚಿನ್ನ ಕಣ್ಣನ್ ಅಳೈಕ್ಕಿರಾನ್’ (ಇಳಯರಾಜಾ), ಹಲವು ವರ್ಷಗಳು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ವೈವಿಧ್ಯತೆ-ಭಾವುಕತೆ- ಮಾದಕತೆಗಳೆಲ್ಲಾ ಹೆಚ್ಚು-ಕಡಿಮೆ ಸಮನಾಗಿ ಮೇಳೈಸಿರುವ ಜಾನಕಿಯವರ ಧ್ವನಿ, ‘ಉತ್ತರ’ದವರಿಗೆ ಬೇಡವಾಯಿತು. ಅದರಿಂದ ನಷ್ಟವೇನೂ ಆಗಲಿಲ್ಲ.

                             ಇಳಯರಾಜಾ

‘ನಾಂದಿ’, ‘ಸನಾದಿ ಅಪ್ಪಣ್ಣ’ದಂತಹ ಚಿತ್ರಗಳು ಜನಪ್ರಿಯವಾಗಲು ವಿಜಯಭಾಸ್ಕರ್- ಜೀಕೆವೆಂ-ಜಾನಕಿಯವರ ಕೊಡುಗೆಯನ್ನು ಅಲ್ಲಗಳೆಯಲಾಗದು. ಶಂಸಾದ್ ಬೇಗಂ-ಗೀತಾ ದತ್-ಲತಾ-ಆಶಾರ ಸಾಲಿಗೆ ಹೆಮ್ಮೆಯ ಸೇರ್ಪಡೆಯಾಗುವ ಜಾನಕಿಯವರಿಗೆ, ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಂದಿವೆ. ಕಳೆದೆರಡು ವರ್ಷಗಳ ಹಿಂದೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ಧಿಕ್ಕರಿಸಿದ ಜಾನಕಿ, ‘ತಮ್ಮ ಸೇವೆಗೆ ಅದಕ್ಕಿಂತಲೂ ಉನ್ನತ ಪ್ರಶಸ್ತಿ ಸರಕಾರ ಕೊಡಬೇಕಿತ್ತು’ ಎಂದರು. ಪ್ರಶಸ್ತಿ ಸ್ವೀಕರಿಸಲಿಲ್ಲ. ಇದೊಂದು ಇರಿಸು-ಮುರಿಸಿನ ವರ್ತನೆ ಎನಿಸಿದರೂ, ಜಾನಕಿ ಹೇಳಿದ್ದರಲ್ಲಿ ಅರ್ಥವಿತ್ತು. ಲತಾ ಸೋದರಿಯರಿಗೆ ಯಾವುದರಲ್ಲೂ ಕಡಿಮೆಯಿಲ್ಲದ ಜಾನಕಿಯವರಿಗೆ ಕೇಂದ್ರ ಸರಕಾರ ಕನಿಷ್ಠ ಒಂದು ದಶಕದಷ್ಟು ಮೊದಲೇ ‘ಪದ್ಮ’ ಪ್ರಶಸ್ತಿ ಕೊಡಬಹುದಾಗಿತ್ತು. ಸ್ವಾತಂತ್ರ ಪೂರ್ವದಲ್ಲೇ ಹಾಡಲಾರಂಭಿಸಿದ, ಪಂಡಿತ್ ನೆಹರೂರಿಂದ ‘ಲತಾ ಭೇಟಿ’ ಎಂದು ಸಂಬೋಧಿಸಿಕೊಳ್ಳುತ್ತಿದ್ದ ಲತಾ ಮಂಗೇಶ್ಕರ್, ಪದ್ಮಭೂಷಣರಾದರು. ಪದ್ಮವಿಭೂಷಣರಾದರು. ‘ಭಾರತ ರತ್ನ’ರಾದರು. ‘ಫಾಲ್ಕೆ’ ಪ್ರಶಸ್ತಿ ಕೂಡಾ ಪಡೆದರು. ಮಧ್ಯಪ್ರದೇಶದ ಸರಕಾರ ಲತಾ ಹೆಸರಿನ ದೊಡ್ಡ ಪ್ರಶಸ್ತಿಯನ್ನೂ ಆರಂಭಿಸಿತು. ಇಲ್ಲಿ ಲತಾ ಅವರ ಪ್ರತಿಭೆ-ಸೇವೆಗಳ ಬಗ್ಗೆ ಯಾವುದೇ ಕರುಬಿಲ್ಲ. ಈ ಎಲ್ಲಾ ಗೌರವಕ್ಕೂ ಆಕೆ ಅರ್ಹರೆ. ಆದರೆ ‘ದಕ್ಷಿಣ’ದವರು ಎಂದು ಆಡಳಿತಾರೂಢ ಕೇಂದ್ರಗಳಿಗೆ ಎಸ್.ಜಾನಕಿ ಬೇಡದವರಾಗಿಯೇ ಉಳಿದರು. ‘ಪದ್ಮ’ ಪ್ರಶಸ್ತಿಯನ್ನು ಧಿಕ್ಕರಿಸಿದ ಜಾನಕಿ ಇದನ್ನೇ ಹೇಳಿದರು.

ಕೋಟ್ಯಂತರ ಕನ್ನಡಿಗರನ್ನು ತಮ್ಮ ಗಾಯನ ಪ್ರತಿಭೆಯಿಂದ ಸಂತೋಷಪಡಿಸಿದ ಎಸ್.ಜಾನಕಿ ನಿವೃತ್ತರಾದರೇನು, ಅವರ ಸ್ವರ ಮಾಧುರ್ಯದ ಹಾಡುಗಳು ನಮ್ಮ ಸ್ಮತಿಪಟಲದಿಂದ ಮರೆಯಾಗಲಾರವು.

ಜಾನಕಿ ಗಾನ ಯಾನ

ಸಿಷತ್ಲಾ ಶ್ರೀರಾಮಮೂರ್ತಿ ಜಾನಕಿ ಆಂಧ್ರ ಮೂಲದವರು. 1938 ಎಪ್ರಿಲ್ 23ರಂದು ಗುಂಟೂರಿನ ಪಲ್ಲಪಟ್ಟದಲ್ಲಿ ಜನಿಸಿದ ಜಾನಕಿ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಸಿನೆಮಾಗಾಗಿ ಹಾಡಲು ಪ್ರಾರಂಭಿಸಿದ್ದರು. ಕಳೆದ ಅರವತ್ತು ವರ್ಷಗಳಲ್ಲಿ ಜಾನಕಿ ಹಾಡಿರುವ ಗೀತೆಗಳ ಸಂಖ್ಯೆ ನಲವತ್ತೆಂಟು ಸಾವಿರ! ಅಂದರೆ ಪ್ರತೀ ದಿನ ಕನಿಷ್ಠ ಸರಾಸರಿ ಎರಡು ಗೀತೆಗಳನ್ನು ಜಾನಕಿ ಹಾಡುತ್ತಾ ಬಂದಿದ್ದರು.

  

ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಬಡಗ, ಒರಿಯಾ, ಹಿಂದಿ, ಬೆಂಗಾಲಿ, ಸಂಸ್ಕೃತ, ಸಿಂಹಳಿ, ಪಂಜಾಬಿ, ಉರ್ದು, ಜಾಪನೀಸ್, ಲ್ಯಾಟಿನ್, ಅರೇಬಿಕ್, ಜರ್ಮನ್ ಸೇರಿದಂತೆ 17 ಭಾಷೆಗಳಲ್ಲಿ ಜಾನಕಿ ಹಾಡಿದ್ದಾರೆಂಬುದು ನಿಜಕ್ಕೂ ಅಚ್ಚರಿಯ ವಿಚಾರ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು, ಮೂವತ್ತಮೂರು ವಿವಿಧ ರಾಜ್ಯ ಪ್ರಶಸ್ತಿಗಳು ಜಾನಕಿಗೆ ಸಂದಿವೆ. ಮೈಸೂರು ವಿಶ್ವವಿದ್ಯಾನಿಲಯವು ಜಾನಕಿಗೆ ಗೌರವ ಡಾಕ್ಟರೇಟ್ ನೀಡಿದೆ.

ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಿದ ಜಾನಕಿ ತನ್ನ ಬಂಧುವೊಬ್ಬರ ಸಲಹೆಯ ಮೇರೆಗೆ 1957ರ ಸುಮಾರಿಗೆ ಮದ್ರಾಸ್ ನಗರಕ್ಕೆ ಬಂದು ಎವಿಎಂ ಸ್ಟುಡಿಯೋಗೆ ಗಾಯಕಿಯಾಗಿ ಸೇರಿದರು. ಹೀಗೆ ಶುರುವಾದ ಅವರ ಸಿನೆಮಾ ಗಾಯನ ನಂತರ ಬಹಳ ಬೇಗನೆ ಏರುಗತಿಯಲ್ಲಿ ಸಾಗಿತು. ಕನ್ನಡ ಸೇರಿದಂತೆ ಜಾನಕಿ ಬಹುಭಾಷಾ ಗಾನವಿಶಾರದೆಯಾಗಿ ತನ್ನ ಛಾಪು ಮೂಡಿಸಿದರು.

ಜಾನಕಿಯವರ ಪತಿ ವಿ.ರಾಮಪ್ರಸಾದ್ ಹಲವು ವರ್ಷಗಳ ಹಿಂದೆ ನಿಧನರಾದರು. ಮಗ ಮುರಳಿ ಕೃಷ್ಣರೊಂದಿಗೆ ಈಗ ಹೈದರಾಬಾದ್‌ನಲ್ಲಿ ಜಾನಕಿ ನೆಲೆಸಿದ್ದಾರೆ.

ಜಾನಕಿಯ ಗಾನ ಯಾನವು ಯಶಸ್ಸಿನ ಶಿಖರವೇರುತ್ತಾ ಹೋದಂತೆ ಅವರು ಸರಳರಾಗುತ್ತಾ, ವಿನೀತರಾಗುತ್ತಾ ಹೋದರು. ಭಾರತೀಯ ಚಿತ್ರರಂಗದ ಮಹಾನ್ ವ್ಯಕ್ತಿಗಳ, ಸಾಧಕರ ಸಾಲಿನಲ್ಲಿ ಎಸ್.ಜಾನಕಿಗೆ ನಿಸ್ಸಂಶಯವಾಗಿ ಒಂದು ಗೌರವದ ಸ್ಥಾನವಿರುತ್ತದೆ.

share
ರಾಘವನ್ ಚಕ್ರವರ್ತಿ
ರಾಘವನ್ ಚಕ್ರವರ್ತಿ
Next Story
X