ನ.5ರಂದು ‘ರಂಗ್‌ರಂಗ್‌ದ ದಿಬ್ಬಣ’ ಉದ್ಘಾಟನೆ
ಉಡುಪಿ, ನ.4: ವಾರಿನ್ ಕಂಬೈನ್ಸ್‌ನ ಶರತ್ ಕೋಟ್ಯಾನ್ ನಿರ್ಮಾಣ ಮತ್ತು ಕೃಷ್ಣಪ್ರಸಾದ್ ಉಪ್ಪಿನಕೋಟೆ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ರಂಗ್ ರಂಗ್‌ದ ದಿಬ್ಬಣ ತುಳುಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭ ನ.5ರಂದು ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ನಡೆಯಲಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರದರ್ಶನ ವನ್ನು ಉದ್ಘಾಟಿಸಲಿರುವರು. ಕಾಪು ಶಾಸಕ ವಿನಯಕುಮಾರ್ ಸೊರಕೆ, ಹಿರಿಯ ಸಂಗೀತ ನಿರ್ದೇಶಕ ಉಡುಪಿ ನಾದವೈಭವಂ ಉಡುಪಿ ವಾಸುದೇವ ಭಟ್ ಮೊದಲಾದವರು ಭಾಗವಹಿಸಲಿರುವರು. ಈ ಸಂದರ್ಭ ರಂಗ್ ರಂಗ್‌ದ ದಿಬ್ಬಣ ಚಿತ್ರದ ಕಲಾವಿದರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
Next Story





