ಕ್ವೀಲ್ ಪೇಪರ್ ಜ್ಯೂವೆಲ್ಲರಿ ಪ್ರದರ್ಶನ, ಪ್ರಮಾಣಪತ್ರ ವಿತರಣಾ ಸಮಾರಂಭ

ಭಟ್ಕಳ, ನ. 4: ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೆಶ್ವರ ಕ್ವೀಲ್ ಪೇಪರ್ ಜ್ಯೂವೆಲ್ಲರಿ ತರಬೇತಿಯಿಂದ ಸಿದ್ದಪಡಿಸಿದ ವಸ್ತು ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ಪುರವರ್ಗದ ಮಂಡೆ ಜಟ್ಕೇಶ್ವರ ದೇವಸ್ಥಾನದಲ್ಲಿ ಜರುಗಿತು.
ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎಂ.ವಿ.ಹೆಗಡೆ ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರು ಪರಿಶ್ರಮದಿಂದ ಕೆಲಸಗಳನ್ನು ಮಾಡಿದಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಭಿಯಾಗಲು ಸಾಧ್ಯ ಎಂದು ತಿಳಿಸಿದರು.
ಯಲವಡಿಕವೂರು ಗ್ರಾ.ಪಂ.ಅಧ್ಯಕ್ಷೆ ಸುಶೀಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಮಹಿಳೆಯರು ಸರ್ವತೋಮುಖ ಅಭಿವೃದ್ದಿಗಾಗಿ ಏಕಾಗ್ರತೆಯಿಂದ ಸ್ವಾವಲಂಭಿ ಜೀವನ ನಡೆಸುವ ಮುಖಾಂತರ ಸಮಾಜ ಮುಖಿಯಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮುದಾಯ ಅಭಿವೃದ್ಧಿ ಯೋಜನಾಧಿಕಾರಿ/ಪ್ರಭಾರಪ್ರಾಚಾರ್ಯರಾದ ಕೆ.ಮರಿಸ್ವಾಮಿ ಮಾತನಾಡುತ್ತಾ ಮಹಿಳೆಯರು ವೃತ್ತಿ ಕುಶಲತೆಯನ್ನು ಅಳವಡಿಸಿಕೊಂಡಾಗ ತಯಾರಿಸಿದ ಕರಕುಶಲ ವಸ್ತುಗಳು ಜನರನ್ನು ಹೆಚ್ಚು ಆಕರ್ಷಿಸುವಂತೆ ಮಾಡುವ ಮೂಲಕ ಹೆಚ್ಚಿನ ಆದಾಂು ಗಳಿಸಬಹುದು ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯಾದ ಸುರೇಶ ನಾಯ್ಕ, ರೀಟಾ ಗೋನ್ಸಾಲ್ವಿಸ್, ಮೇರಿ ರೋಡರಗಿಸ್ , ಕೆ.ಡಿ.ಡಿ.ಸಿ ಸಂಸ್ಥೆಯ ಫೇಲಿಕ್ಸ್ ಫರ್ನಾಂಡಿಸ್, ತರಬೇತಿ ಶಿಕ್ಷಕಿಯಾದ ಸವಿತಾ ಭಂಡಾರಿ, ಹಾಗೂ ಸಿ.ಡಿ.ಟಿ.ಪಿ ಯೋಜನೆಯ ಪ್ರಕಾಶ ಜಯ ಶೀ ಚನ್ನಯ್ಯ ಉಪಸ್ಥಿತರಿದ್ದರು.
ನಯನಾ ನಾಯ್ಕ ಪ್ರಾರ್ಥಿಸಿದರು, ಆರತಿ ಸ್ವಾಗತಿಸಿದರು, ಫೇಲಿಕ್ಸ್ ಫರ್ನಾಂಡಿಸ್ ನಿರೂಪಿಸಿದರು, ಗುಲಾಬಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಜಾತ, ದೀಪಾ ಮಂಗಲಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.







