ಮಹಿಳೆ ಆತ್ಮಹತ್ಯೆ: ಕೊಲೆ ಆರೋಪ
ಮೈಸೂರು, ನ.4: ವಿವಾಹವಾಗಿ ಏಳು ತಿಂಗಳಲ್ಲೇ ಮಹಿಳೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಮೈಸೂರಿನ ಗಂಗೋತ್ರಿ ಲೇ ಔಟ್ ನಲ್ಲಿ ನಡೆದಿದೆ.
ಮೃತಳನ್ನು ಮೈಸೂರು ನಿವಾಸಿ ವಿಜಯ್ ಎಂಬಾತನ ಪತ್ನಿ ಅಕ್ಷತಾ (25) ಎಂದು ಹೇಳಲಾಗಿದೆ.
ಭಟ್ಕಳ ಮೂಲದ ಈಕೆಯನ್ನು ಏಳು ತಿಂಗಳ ಹಿಂದೆ ವಿಜಯ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಕ್ಷತಾ ಶನಿವಾರ ಬೆಳಿಗ್ಗೆ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆಕೆಯ ಮನೆಯವರು ಆಕೆ ನೇಣು ಹಾಕಿಕೊಂಡಿಲ್ಲ ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story