ದೇರಳಕಟ್ಟೆ: ‘ನಂಡೆ ಪೆಂಙಳ್’ ಅಭಿಯಾನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ

ಮಂಗಳೂರು, ನ.4: ನಂಡೆ ಪೆಂಙಳ್’ ಸ್ವಾಗತ ಸಮಿತಿ ದೇರಳಕಟ್ಟೆ ಮತ್ತು ಉಳ್ಳಾಲ ವಲಯ ಹಾಗೂ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದೊಂದಿಗೆ ‘ನಂಡೆ ಪೆಂಙಳ್’ ಅಭಿಯಾನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ದೇರಳಕಟ್ಟೆಯ ಬಿಸಿಸಿ ಸಭಾಂಗಣದಲ್ಲಿ ಜರಗಿತು.
ಉಸ್ತಾದ್ ಇಬ್ರಾಹಿಂ ಬಾಖವಿ ಕೆ.ಸಿ ರೋಡ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತನ್ನ ಸಂಕಷ್ಟಗಳನ್ನು ಬದಿಗಿಟ್ಟು ಇತರರ ಸಂತೋಷಕ್ಕಾಗಿ, ಸಹಾಯಕ್ಕಾಗಿ ಪ್ರಯತ್ನ ಮಾಡುವವರು ನಿಜವಾಗಿಯೂ ಭಾಗ್ಯವಂತರು ಈ ಕೆಲಸವನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ನಂಡೆ ಪೆಂಙಳ್ ಅಭಿಯಾನದ ಉದ್ದೇಶವಾದ ದ.ಕ ಜಿಲ್ಲೆಯ ಮೂವತ್ತು ವರ್ಷ ಮೀರಿದ ಸಾವಿರಾರು ಯುವತಿಯರ ಮದುವೆ ಮಾಡಿಸುವ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಕೈಜೋಡಿಸಬೇಕು ಎಂದರು.
ನಂಡೆ ಪೆಂಙಳ್’ ಸ್ವಾಗತ ಸಮಿತಿ ದೇರಳಕಟ್ಟೆ ಮತ್ತು ಉಳ್ಳಾಲ ವಲಯದ ಅಧ್ಯಕ್ಷ ನೌಷಾದ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ನಂಡೆ ಪೆಂಙಳ್’ ಅಭಿಯಾನದ ಸಂಚಾಲಕ ಮುಹಮ್ಮದ್ ಯು.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಷಯ ಮಂಡಿಸಿದ ನಂಡೆ ಪೆಂಙಳ್’ ಅಭಿಯಾನದ ಪ್ರಚಾರ ಸಮಿತಿ ಮುಖ್ಯಸ್ತ ರಫೀಕ್ ಮಾಸ್ಟರ್, ಸಮಾಜದ ಕಣ್ಣೀರ ನೋವುಗಳನ್ನು ಸಭೆಯ ಮುಂದೆ ತೆರೆದಿಟ್ಟರು.
ನಂಡೆ ಪೆಂಙಳ್’ ಅಭಿಯಾನದ ಸರ್ವೆ ಮುಖ್ಯಸ್ತ ಹಮೀದ್ ಕಣ್ಣೂರು, ಉದ್ಯಮಿ ಲತೀಫ್ ಕೆ.ಸಿ ರೋಡ್, ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮತ್ತಿತರು ಉಪಸ್ಥಿತರಿದ್ದರು.
ನಂಡೆ ಪೆಂಙಳ್’ ಸ್ವಾಗತ ಸಮಿತಿ ದೇರಳಕಟ್ಟೆ ಮತ್ತು ಉಳ್ಳಾಲ ವಲಯದ ಸಂಚಾಲಕ ಇಬ್ರಾಹಿಂ ಕೋಣಾಜೆ ಸ್ವಾಗತಿಸಿದರು. ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ವಂದಿಸಿದರು. ಕೋಶಾಧಿಕಾರಿ ಇಸ್ಮತ್ ಫಜೀರ್ ಕಾರ್ಯಕ್ರಮ ನಿರೂಪಿಸಿದರು.







