Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕಂಡ ಹಾಗೆ ಮತ್ತು ಗೌರಿ ಲಂಕೇಶ್...

ಕಂಡ ಹಾಗೆ ಮತ್ತು ಗೌರಿ ಲಂಕೇಶ್ ವ್ಯಕ್ತಿತ್ವ

ನಾನು ಓದಿದ ಪುಸ್ತಕ

ಇಸ್ಮತ್ ಪಜೀರ್ಇಸ್ಮತ್ ಪಜೀರ್4 Nov 2017 9:37 PM IST
share
ಕಂಡ ಹಾಗೆ ಮತ್ತು ಗೌರಿ ಲಂಕೇಶ್ ವ್ಯಕ್ತಿತ್ವ

‘‘ಎಷ್ಟಾದರೂ ಗೌರಿ ಲಂಕೇಶ್ ಅವರಪ್ಪನಂತಾಗಲಿಲ್ಲ’’ ಎಂದು ಗೌರಿ ಲಂಕೇಶ್ ಅವರ ಬರಹದ ಬಗ್ಗೆ ಅನೇಕರು ಕಚ್ಚಾ ವಿಮರ್ಶೆ ಮಾಡುವುದನ್ನು ನಾವು ಕೇಳಿರುತ್ತೇವೆ. ಸಾಹಿತ್ಯದ ಹಾಗೂ ಸೃಜನಶೀಲತೆಯ ಮಟ್ಟಿಗೆ ಅದು ಸತ್ಯವಿರಬಹುದು. ಆದರೆ ಇಂತಹ ಹೋಲಿಕೆಗಳೇ ಅರ್ಥವಿಲ್ಲದ್ದು. ಹೋರಾಟಕ್ಕೆ ಸಂಬಂಧಿಸಿ ಹೇಳುವುದಾದರೆ ಗೌರಿ ಅವರ ತಂದೆಗಿಂತ ಭಿನ್ನ ದಾರಿ ಹಿಡಿದು ಬಹಳ ಮುಂದೆ ಸಾಗಿದ್ದರು.

ಗೌರಿಯವರಿಗೆ ಬರವಣಿಗೆ ಮತ್ತು ಪತ್ರಿಕೆ ಹೋರಾಟದ ಅವಿಭಾಜ್ಯ ಅಂಗವಾಗಿತ್ತೇ ಹೊರತು ಕೇವಲ ಸಾಹಿತ್ಯದ ಸೃಷ್ಟಿಯಾಗಿರಲಿಲ್ಲ. ಅದನ್ನು ಅರ್ಥೈಸಬೇಕಾದರೆ ಗೌರಿ ಬರೆದ ಅವರ ಸಂಪಾದಕೀಯ ಬರಹಗಳ ಸಂಕಲನ ‘‘ಕಂಡ ಹಾಗೆ’’ ಓದಬೇಕು. ಅಂದಹಾಗೆ ಅದು ಕೇವಲ ಹೋರಾಟದ ಅಭಿವ್ಯಕ್ತಿಯೆಂಬ ಚೌಕಟ್ಟಿಗೆ ಸೀಮಿತ ವಾಗದೇ ಪ್ರೀತಿ, ಪ್ರೇಮ, ಕ್ರೀಡೆ, ವ್ಯಕ್ತಿಚಿತ್ರ, ರಾಜಕೀಯ, ಅಂರಾಷ್ಟ್ರೀಯ ವಿದ್ಯಮಾನಗಳು ಹೀಗೆ ಬೇರೆ ಬೇರೆ ಸ್ತರಗಳಲ್ಲಿ ವಿಸ್ತರಿಸಿಕೊಂಡಿದೆ.

           ಗೌರಿ ಲಂಕೇಶ್

ಗೌರಿ ಲಂಕೇಶ್ ಪತ್ರಿಕೆ ಪ್ರಾರಂಭಿಸಿದಂದಿನಿಂದ ಒಂದೇ ಒಂದು ಸಂಚಿಕೆಯನ್ನೂ ತಪ್ಪಿಸದೇ ಓದಿದ ನನಗೆ ಅದನ್ನು ಕೃತಿರೂಪದಲ್ಲಿ ಓದಿದಾಗ ಹಳೇ ವಿಚಾರಗಳೆಂದು ಅನ್ನಿಸಲೇ ಇಲ್ಲ. ಸಾಮಾನ್ಯವಾಗಿ ಪತ್ರಿಕಾ ಬರಹಗಳು ಸಾಂದರ್ಭಿಕ ಪ್ರತಿಸ್ಪಂದನೆಗಳಾಗಿರುತ್ತವೆ. ಗೌರಿ ಯಾವುದನ್ನೂ ಕೇವಲ ಸಾಂದರ್ಭಿಕ ಪ್ರತಿಸ್ಪಂದನೆಗೆ ಸೀಮಿತಗೊಳಿಸದೇ ವಸ್ತು ವಿಷಯಗಳನ್ನು ಬೆಳೆಸುತ್ತಾ ಹೋಗಿದ್ದಾರೆ. ವಿಷಯದ ಆಳಕ್ಕಿಳಿದು ಅದರ ಭೂತ ಮತ್ತು ಭವಿಷ್ಯಗಳನ್ನು ವರ್ತಮಾನದ ಸಂದರ್ಭದಲ್ಲಿಟ್ಟು ವಿಶ್ಲೇಷಿಸಿದ್ದಾರೆ

ಎಲ್ಲೋ ಕೆಲವೊಂದು ಬರಹಗಳಿಗೆ ಕಾಲಮಿತಿಗಳಿರುವುದು ಬಿಟ್ಟರೆ ಹೆಚ್ಚಿನೆಲ್ಲಾ ಲೇಖನಗಳು ಅವುಗಳನ್ನು ಬರೆದು ಎಂಟು ಹತ್ತು ವರ್ಷಗಳ ಬಳಿಕವೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿವೆ ಮತ್ತು ಇನ್ನೂ ತಾಜಾ ಆಗಿಯೇ ಇವೆೆ.

ಗೌರಿ ಮೂಲತಃ ಸಾಹಿತ್ಯದ ವಿದ್ಯಾರ್ಥಿನಿಯಲ್ಲ. ಗೌರಿ ಕನ್ನಡ ಪತ್ರಿಕೋದ್ಯಮಕ್ಕೆ ಬಂದಿದ್ದೇ ಅವರಪ್ಪ ಪ್ರಾರಂಭಿಸಿದ ಮಿಷನನ್ನು ಮುಂದುವರಿಸುವ ಸಲು ವಾಗಿ. ಅವರು ಕನ್ನಡ ಪತ್ರಿಕೋದ್ಯಮಕ್ಕೆ ಬಂದಾಗ ಅವರಿಗೆ ಕನ್ನಡದ ಮೇಲೆ ಗಟ್ಟಿ ಹಿಡಿತವಿರಲಿಲ್ಲ. ನನ್ನ ಮಟ್ಟಿಗೆ ಅದು ಅವರಿಗೆ ವರದಾನವಾಯಿತೆಂದೇ ಅನಿಸುತ್ತದೆ. ಆದುದರಿಂದ ಗೌರಿ ಸರಳವಾಗಿ ಬರೆಯುತ್ತಾ ಬಂದರು.ಲಂಕೇಶರ ಬರಹಕ್ಕಿಂತಲೂ ಪಾಮರ ವರ್ಗಕ್ಕೆ ಗೌರಿಯ ಬರಹ ಆಪ್ತವಾಯಿತು. ಅವರ ಬರಹಗಳು ಬಾಯಿಮಾತಿನಲ್ಲಿ ಕತೆ ಹೇಳಿದಂತಿವೆ. ಎಂತಹದ್ದೇ ಜಟಿಲ ವಿಚಾರವನ್ನು ಸರಳವಾಗಿ ಸಾಮಾನ್ಯ ಓದುಗನಿಗೆ ಅರ್ಥೈಸಿಕೊಡುವ ಗುಣ ಗೌರಿಯ ಬರಹದಲ್ಲಿದೆ.

ಕಂಡಹಾಗೆ ಮೂರು ಸಂಪುಟಗಳಲ್ಲಿ ಬಂದಿವೆ. ಗೌರಿ ಸಂಪುಟದಿಂದ ಸಂಪುಟಕ್ಕೆ ಬೆಳೆಯುತ್ತಾ ಬಂದಿರುವುದು ಎಂತಹ ಓದುಗನಿಗೂ ಅರ್ಥವಾ ಗುತ್ತದೆ. ಕಂಡಹಾಗೆ ಒಂದು ವಿಧದ Encyclopedia ಎಂದರೆ ಅತಿಶಯೋಕ್ತಿಯಾಗದು. ಅಲ್ಲಿ ಗೌರಿ ಆಯ್ಕೆ ಮಾಡಿಕೊಂಡ ವಿಷಯಗಳ ಹರವು ಅಷ್ಟು ವಿಸ್ತಾರವಾಗಿದೆ. ಇಲ್ಲಿ ರಾಜಕೀಯ, ಜಾತಿವಾದ, ಕೋಮುವಾದ, ಯುದ್ಧ, ಸಿನೆಮಾ, ಪ್ರಕೃತಿ, ಜನಸಾ ಮಾನ್ಯರ ಬದುಕು ಮತ್ತು ಹೋರಾಟ, ವ್ಯಕ್ತಿಚಿತ್ರ, ಫೆಮಿನಿಸಮ್ , ಅಂತಾರಾಷ್ಟ್ರೀಯ ರಾಜಕೀಯ ವಿದ್ಯ ಮಾನಗಳು, ಭಯೋತ್ಪಾದನೆ ಹೀಗೆ ವೈವಿಧ್ಯಮಯ ವಸ್ತು ವಿಷಯಗಳಿವೆ. ತಾಯಿಯ ಸಂಕಟವನ್ನು ಪಿಶಾಚಿಯ ಕೂಗೆಂದರೆ, ಹುಡುಗಿಯೊಬ್ಬಳ ರಕ್ತದ ಪುಟಗಳು, ದೌರ್ಜನ್ಯ ಮತ್ತು ಮಹಿಳೆಯರ ನಗ್ನ ಪ್ರತಿಭಟನೆ, ಮನುಷ್ಯನಿಂದ ಮಾತ್ರ ಆಸಿಡ್ ದಾಳಿಯೆಂಬ ಮೃಗತ್ವ ಸಾಧ್ಯ, ಒಂದು ಪ್ರೀತಿಯ ಕೊಲೆ ಮುಂತಾದ ಲೇಖನಗಳಲ್ಲಿ ಸಿಗರೇಟು ಮತ್ತು ಮದ್ಯ ಸೇವಿಸುವ ಗಂಡುಬೀರಿ ಗೌರಿಯ ತಾಯ್ತನ ಕಾಣಸಿಗುತ್ತದೆ. ಹೆಣ್ಣು ಹೃದಯದ ಲೇಖಕಿಯ ಆರ್ದ್ರವಾದ ಸಂಕಟ ಮತ್ತು ನೋವು ಕಾಣಸಿಗುತ್ತದೆ.ಅಷ್ಟೇ ಗಟ್ಟಿಯಾಗಿ ಪುರುಷ ಪ್ರಧಾನ ಸಮಾಜದ ವಿರುದ್ಧ ಪ್ರತಿಭಟನೆಯ ರೋಷ ಮತ್ತು ಸಿಟ್ಟು ಕಾಣಸಿಗುತ್ತದೆ.

ತೇಜಸ್ವಿ, ಪ್ರೊ.ರಾಮದಾಸ್, ರಾಷ್ಟ್ರ ಕವಿ ಜಿಎಸ್ಸೆಸ್, ಡಾ. ರಾಜಕುಮಾರ್ ಮುಂತಾದ ಕನ್ನಡ ಸಾರಸ್ವತ ಲೋಕದ ಮೇರು ವ್ಯಕ್ತಿತ್ವಗಳನ್ನು ಅವರೊಂದಿಗಿನ ತನ್ನ ಒಡನಾಟದ ಹಿನ್ನೆಲೆಯಲ್ಲಿ ಸರಳ ವಾಕ್ಯಗಳಲ್ಲಿ ಸುಂದರವಾಗಿ ಗೌರಿ ಕಟ್ಟಿಕೊಟ್ಟಿದ್ದಾರೆ. ಸಫಾಯಿ ಕರ್ಮಚಾರಿಗಳ ದಯನೀಯ ಬದುಕು, ಜಾತಿ ದುರಹಂಕಾರ ಮತ್ತು ಮೀಸಲಾತಿ, ನನ್ನ ಕಡಿದು ತುಂಡರಿಸಿದರೂ ಬಿಡುವವನಲ್ಲ ಮುಂತಾದ ಲೇಖನಗಳಲ್ಲಿ ಸಮಾಜದ ಕಟ್ಟ ಕಡೆಯವರ, ಧ್ವನಿಯಿಲ್ಲದವರ ಧ್ವನಿಯಾಗಿ ಗೌರಿ ಮಾತನಾಡುತ್ತಾರೆ.

ಮಾನವ ಬಾಂಬ್‌ಗಳ ಮನುಷ್ಯತ್ವ, ಜೆರುಸಲೆಮ್ ಯುದ್ಧಭೂಮಿಯೋ, ಪುಣ್ಯ ಭೂಮಿಯೋ? ಮುಂತಾದ ಲೇಖನಗಳಲ್ಲಿ ಜನಮಾನಸದಲ್ಲಿ ತಳವೂರಿರುವ ಮಿಥ್ಯೆಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಾರೆ. ನ್ಯಾಯದ ಮುಖವಾಡ ಹೊತ್ತ ದುಷ್ಟರ ಮುಖವಾಡ ಕಳಚುತ್ತಾರೆ. ಹೊರಜಗತ್ತಿಗೆ ಕಾಣದ ಅವರ ಕರಾಳ ಮುಖದ ದರ್ಶನ ಮಾಡಿಸುತ್ತಾರೆ. ಮಾನವ ಬಾಂಬ್... ಎಂಬ ಲೇಖನದಲ್ಲಿ ಭಯೋತ್ಪಾದಕನಾಗುವಾತನ ಅಸಹಾಯಕತೆ, ಅದರ ದುರ್ಲಾಭ ಪಡಕೊಳ್ಳುವ ಮೂಲಭೂತವಾದಿಗಳು, ಮಾನವ ಬಾಂಬರ್‌ಗಳ ಹತಾಶೆ, ಅವರೊಳಗಿನ ಮಾನವ ಹೃದಯ, ಭಾವನೆಗಳ ತಾಕಲಾಟ ಇವೆಲ್ಲವನ್ನೂ ಬಿಚ್ಚಿಟ್ಟಿದ್ದಾರೆ.

ಗೌರಿಯವರ ಬರಹದಲ್ಲಿ ಅಡ್ಡಗೋಡೆಯ ಮೇಲೆ ದೀಪವಿಡುವ ಪ್ರವೃತ್ತಿ ಇಲ್ಲವೇ ಇಲ್ಲ. ಗೌರಿ ಎಲ್ಲೂ ಸುರಕ್ಷಿತ ವಲಯವನ್ನು ಆಶ್ರಯಿಸು ವುದಿಲ್ಲ. ಬೆಂಕಿಯೊಡನೆ ಆಟವಾಡುವ ಸಾಹಸ ಪ್ರವೃತ್ತಿ ಗೌರಿಯ ಹುಟ್ಟುಗುಣ. ಸೈದ್ಧ್ದಾಂತಿಕ ಮತ್ತು ವೈಚಾರಿಕ ಶತ್ರುವಿನ ದೈತ್ಯತೆ ಗೌರಿಯ ಧೈರ್ಯದ ಮುಂದೆ ಕುಬ್ಜಗೊಂಡಂತೆ ಕಾಣುತ್ತದೆ. ಅಂತಹ ಅದಮ್ಯ ಧೈರ್ಯ ಗೌರಿಯದ್ದು. ಗೌರಿ ಲಂಕೇಶರ ವ್ಯಕ್ತಿತ್ವವನ್ನು ಗೌರಿಯ ಬರಹಗಳ ಮೂಲಕ ಅರಿಯಲು ಸಾಧ್ಯ. ಅದಕ್ಕೆ ಕಂಡಹಾಗೆ ಒಳ್ಳೆಯ ಕೃತಿ. ಒಟ್ಟಿನಲ್ಲಿ ಗೌರಿಯನ್ನು ಅರಿಯಬೇಕಾದರೆ ಗೌರಿಯ ಬರಹಗಳನ್ನು ಓದಬೇಕು.

share
ಇಸ್ಮತ್ ಪಜೀರ್
ಇಸ್ಮತ್ ಪಜೀರ್
Next Story
X