ರೈಲು ಹರಿದು ಯುವಕ ಮೃತ್ಯು
ಮಂಡ್ಯ, ನ.4: ರೈಲ್ವೆ ಹಳಿ ದಾಟುತ್ತಿದ್ದ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ನಗರದ ಕುರುಬರ ವಿದ್ಯಾರ್ಥಿನಿಲಯದ ಹಿಂಭಾಗ ನಡೆದಿದೆ.
ತಾಲೂಕಿನ ಮಾರಗೌಡನಹಳ್ಳಿಯ ಬಸವರಾಜು ಅವರ ಪುತ್ರ ಎಂ.ಬಿ.ಪುನೀತ್‍ಕುಮಾರ್(25) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ಪುನೀತ್‍ಕುಮಾರ್ ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡು ಹಳಿ ದಾಟುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





