ದಕ್ಷಿಣ ಕಾಶ್ಮೀರದಲ್ಲಿ 115 ಉಗ್ರರು: ಮೇಜರ್ ಜನರಲ್ ಬಿ.ಎಸ್. ರಾಜು

ಪುಲ್ವಾಮಾ, ನ. 4: ದಕ್ಷಿಣ ಕಾಶ್ಮೀರದಲ್ಲಿ 115 ಭಯೋತ್ಪಾದಕ ರಿದ್ದಾರೆ ಎಂದು ಶುಕ್ರವಾರ ಭಾರತೀಯ ಸೇನೆ ಹೇಳಿದೆ.
ದಕ್ಷಿಣ ಕಾಶ್ಮೀರದಲ್ಲಿ 99 ಸ್ಥಳೀಯ ಭಯೋತ್ಪಾದಕರು ಹಾಗೂ 15 ವಿದೇಶಿ ಭಯೋತ್ಪಾದಕರು ಇದ್ದಾರೆ. ಕಳೆದ 6 ತಿಂಗಳಲ್ಲಿ 80 ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ವಿಕ್ಟರ್ ಪಡೆಯ ವರಿಷ್ಠ ಮೇಜರ್ ಜನರಲ್ ಬಿ.ಎಸ್. ರಾಜು ತಿಳಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಸಂಬೂರಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಓರ್ವ ಭಯೋತ್ಪಾದಕ ಮೃತಪಟ್ಟ ಎರಡು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಯುವಕರು ಭಯೋತ್ಪಾದನೆಯಿಂದ ದೂರ ಇರಿ. ಶರಣಾಗುವ ಭಯೋತ್ಪಾದಕರಿಗೆ ಪುನರ್ವಸತಿಗಾಗಿ ಎಲ್ಲ ನೆರವು ನೀಡಲಾಗುವುದು ಎಂದು ರಾಜು ಹೇಳಿದ್ದಾರೆ.
Next Story





