ಪ್ರತ್ಯೇಕತಾವಾದಿ ಕ್ಯಾಟಲನ್ ನಾಯಕನ ವಿರುದ್ಧ ಬಂಧನಾದೇಶ

ಮ್ಯಾಡ್ರಿಡ್, ನ. 4: ಕ್ಯಾಟಲೋನಿಯದ ಪದಚ್ಯುತ ಪ್ರತ್ಯೇಕತಾವಾದಿ ನಾಯಕ ಕಾರ್ಲ್ಸ್ ಪಿಜ್‌ಮಾಂಟ್ ವಿರುದ್ಧ ಸ್ಪೇನ್‌ನ ನ್ಯಾಯಾಧೀಶರೊಬ್ಬರು ಐರೋಪ್ಯ ಒಕ್ಕೂಟ ಬಂಧನಾದೇಶ ಹೊರಡಿಸಿದ್ದಾರೆ.
ಕ್ಯಾಟಲೋನಿಯದ ವಿಪ್ಲವಕಾರಿ ಸ್ವಾತಂತ್ರ್ಯ ಆಂದೋಲನದಲ್ಲಿ ವಹಿಸಿದ ಪಾತ್ರದ ಬಗ್ಗೆ ವಿಚಾರಣೆಗೆ ಹಾಜರಾಗಲು ಅವರು ವಿಫಲರಾದ ಒಂದು ದಿನದ ಬಳಿಕ ಬಂಧನಾದೇಶ ಹೊರಬಿದ್ದಿದೆ.
ಈ ಆದೇಶದ ಬೆನ್ನಿಗೇ ಶ್ರೀಮಂತ ಕ್ಯಾಟಲೋನಿಯ ವಲಯದಾದ್ಯಂತ ಸ್ಪೇನ್ ಸರಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟನಕಾರರು ಕ್ಯಾಟಲನ್ ಧ್ವಜಗಳನ್ನು ಹಿಡಿದು ರಸ್ತೆಗಿಳಿದಿದ್ದಾರೆ.
ಬೆಲ್ಜಿಯಂನಲ್ಲಿ ಆಶ್ರಯ ಪಡೆದಿರುವ ಪಿಜ್‌ಮಾಂಟ್ ವಿರುದ್ಧ ಬಂಡಾಯ, ದೇಶದ್ರೋಹ ಮತ್ತು ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿದ ಆರೋಪಗಳನ್ನು ಹೊರಿಸಲು ಸ್ಪೇನ್ ಪ್ರಾಸಿಕ್ಯೂಟರ್‌ಗಳು ಬಯಸಿದ್ದಾರೆ.
Next Story





